ADVERTISEMENT

ಈ ವಾರ ತೆರೆಗೆ ವಿಜಯಧ್ವಜ, ಮಜ್ಜಿಗೆ ಹುಳಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 19:30 IST
Last Updated 6 ಜೂನ್ 2019, 19:30 IST
ವಿಜಯಧ್ವಜ
ವಿಜಯಧ್ವಜ   

ಮಜ್ಜಿಗೆ ಹುಳಿ

ಎಸ್.ಎಲ್.ವಿ ಆರ್ಟ್ಸ್ ಲಾಂಛನದಲ್ಲಿ ಎಸ್.ರಾಮಚಂದ್ರ ಈ ಸಿನಿಮಾ ನಿರ್ಮಿಸಿದ್ದಾರೆ. ರಘುರಾಜ್ ಹಾಗೂ ಗಂಗಾಧರ್ ಈ ಚಿತ್ರದ ಸಹ ನಿರ್ಮಾಪಕರು.

ರವೀಂದ್ರ ಕೊಟಕಿ ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ ಮಾಡಿ, ನಿರ್ದೇಶನ ಮಾಡಿದ್ದಾರೆ. ಎಂ.ಸಂಜೀವರಾವ್ ಸಂಗೀತ, ನರಸಿಂಹಮೂರ್ತಿ, ಶ್ಯಾಂಸುಂದರ್ ಛಾಯಾಗ್ರಹಣ, ಸಂಜೀವರೆಡ್ಡಿ ಸಂಕಲನ ಹಾಗೂ ಅರವಿಂದ್, ಹೈಟ್ ಮಂಜು, ಗಗಂ ರಾಜು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕೆ ಇದೆ. ತಾರಾಬಳಗದಲ್ಲಿ ದೀಕ್ಷಿತ್ ವೆಂಕಟೇಶ್, ರೂಪಿಕಾ, ಸುಚೀಂದ್ರ ಪ್ರಸಾದ್, ಮೋಹನ್ ಜುನೇಜ, ರಮೇಶ್ ಭಟ್, ಮಿಮಿಕ್ರಿ ದಯಾನಂದ್, ತರಂಗ ವಿಶ್ವ, ಕೆಂಪೇಗೌಡ, ಕುರಿ ಸುನೀಲ್, ಮಲ್ಲೇಶ್, ಶಂಕರ್‌ನಾರಾಯಣ್ ಇದ್ದಾರೆ.

ADVERTISEMENT

ವಿಜಯಧ್ವಜ

ದರ್ಶನ್ ನಿರ್ಮಾಣ ಮತ್ತು ಶ್ರೀನಾಥ್ ವಸಿಷ್ಠ ನಿರ್ದೇಶಿಸಿರುವ ಮಕ್ಕಳಸಿನಿಮಾ ಇದು.ಕಥೆ, ಚಿತ್ರಕಥೆಜೆ.ಎಂ. ಪ್ರಹ್ಲಾದ್ ಅವರದ್ದು. ಪವನ್ ಕುಮಾರ್ ಛಾಯಾಗ್ರಹಣ, ಪ್ರವೀಣ್ ಡಿ.ರಾವ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.ತಾರಾಗಣದಲ್ಲಿ ಶಾಲಾ ವಿದ್ಯಾರ್ಥಿಗಳಾಗಿ ತನ್ಮಯಿ ಎಸ್. ವಸಿಷ್ಠ, ಯೋಧ ವಿಜಯ ಭಾಸ್ಕರ್, ಮಾಸ್ಟರ್ ಲೋಕೇಶ್, ಮಾಸ್ಟರ್ ಭುವನ್, ಮಾಸ್ಟರ್ ರಕ್ಷನ್, ಉಪಾಧ್ಯಾಯರಾಗಿ ನಾಗೇಶ್ ಯಾದವ್, ಕಾರ್ಗಿಲ್ ಸೈನಿಕನಾಗಿ ಕ್ಯಾಪ್ಟನ್ ನವೀನ್ ನಾಗಪ್ಪ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.