ADVERTISEMENT

ಎಡಗೈ ಅಪಘಾತಕ್ಕೆ ಕಾರಣ ತೆರೆಗೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 16:45 IST
Last Updated 12 ಜೂನ್ 2025, 16:45 IST
ಪೋಸ್ಟರ್‌
ಪೋಸ್ಟರ್‌   

ನಟ ದಿಗಂತ್‌ ನಟನೆಯ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ತೆರೆಕಂಡಿದೆ. ಭಿನ್ನವಾದ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಸಮರ್ಥ್ ಬಿ. ಕಡಕೊಳ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. 

ಸಿನಿಮಾದ ಶೀರ್ಷಿಕೆ ಹೇಳುವಂತೆಯೇ ಎಡಗೈ ಬಳಸುವವರ ಕಷ್ಟಗಳ ಸುತ್ತ ಚಿತ್ರದ ಕಥೆಯಿದೆ. ಡಾರ್ಕ್‌ ಕಾಮಿಡಿ ಜಾನರ್‌ನಲ್ಲಿ ಚಿತ್ರದ ಕಥಾಹಂದರವಿದೆ. ಸಿನಿಮಾದಲ್ಲಿ ದಿಗಂತ್ ಜೊತೆ ನಿಧಿ ಸುಬ್ಬಯ್ಯ ಮತ್ತು ಧನು ಹರ್ಷ ನಟಿಸಿದ್ದು, ‘ಪಂಚರಂಗಿ’ ಸಿನಿಮಾ ಬಳಿಕ ದಿಗಂತ್ ಮತ್ತು ನಿಧಿ ಸುಬ್ಬಯ್ಯ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

‘ಲೋಹಿತ್‌ ರಾಜೇಶ್‌’ ಎಂಬ ಪಾತ್ರದಲ್ಲಿ ದಿಗಂತ್‌ ಪ್ರೇಕ್ಷಕರ ಎದುರಿಗೆ ಬರಲಿದ್ದಾರೆ. ಬಲವಂತವಾಗಿ ಬಲಗೈ ಬಳಸಲು ಹೋದಾಗ ನಡೆಯುವ ಘಟನೆಗಳೇ ಚಿತ್ರದ ಕಥೆ ಎಂದಿದೆ ಚಿತ್ರತಂಡ. ಚಿತ್ರಕ್ಕೆ ‘ಬ್ಲಿಂಕ್’ ಮತ್ತು ‘ಶಾಖಾಹಾರಿ’ ಸಿನಿಮಾದ ನಿರ್ಮಾಪಕರು ಕೈ ಜೋಡಿಸಿದ್ದಾರೆ. ಇದು ಸಮರ್ಥ್ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.