ADVERTISEMENT

ಓಟ್‌ ಹಾಕ್ರಿ... ಧನ್‌ ಧನಾ ದನ್‌ ಎಂದ ಉಪೇಂದ್ರ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2022, 10:13 IST
Last Updated 20 ಡಿಸೆಂಬರ್ 2022, 10:13 IST
‘ಎಲೆಕ್ಷನ್‌ ಧನ್‌ ಧನಾಧನ್‌’ ಹಾಡನ್ನು ಚಿತ್ರ ತಂಡದೊಂದಿಗೆ ಬಿಡುಗಡೆ ಮಾಡಿದ ನಟ ಉಪೇಂದ್ರ
‘ಎಲೆಕ್ಷನ್‌ ಧನ್‌ ಧನಾಧನ್‌’ ಹಾಡನ್ನು ಚಿತ್ರ ತಂಡದೊಂದಿಗೆ ಬಿಡುಗಡೆ ಮಾಡಿದ ನಟ ಉಪೇಂದ್ರ   

ಓಟ್ಹಾಕ್ರಿ ಓಟ್ಹಾಕ್ರಿ ಓಟ್ಹಾಕ್ರಿ... ಓಟು ಒತ್ತಿದ ಮ್ಯಾಲೆ ಬಿಟ್ಹಾಕ್ರಿ... ಇದು ಉಪೇಂದ್ರ ಅವರ ಧ್ವನಿಯಲ್ಲಿ ಮೂಡಿಬಂದಿರುವ ಹೊಸ ಹಾಡು.

ಡಾ. ವರದರಾಜು ಡಿ.ಎನ್. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಮಾಡಿರುವ ‘ಪ್ರಜಾರಾಜ್ಯ’ ಚಿತ್ರಕ್ಕಾಗಿ ಯೋಗರಾಜ್ ಭಟ್ ಅವರು ‘ಜೈ ಎಲೆಕ್ಷನ್ ಧನ್ ಧನಾ ಧನ್’ ಎಂಬ ಹಾಡನ್ನು ಬರೆದಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಈ ಹಾಡನ್ನು ಹಾಡಿದ್ದಾರೆ. ವಿಜೇತ್ ಮಂಜಯ್ಯ ಸಂಗೀತ ನೀಡಿದ್ದಾರೆ. ಆನಂದ್ ಆಡಿಯೋ ಮೂಲಕ ಈ ಹಾಡು ಬಿಡುಗಡೆಯಾಗಿದೆ.

‘ಎಲೆಕ್ಷನ್ ಕುರಿತಾದ ಈ ಹಾಡು ಸೊಗಸಾಗಿದೆ. ನೀವು ನಿಮ್ಮ ಮತವನ್ನು ದೇಶ, ರಾಜ್ಯಕ್ಕಾಗಿ ಎನ್ನುವುದಕ್ಕಿಂತ, ನನ್ನ ಮನೆ, ನನ್ನ ಮಕ್ಕಳು ಹಾಗೂ ನನ್ನ ಜೀವನಕ್ಕೆ ಬಹಳ ಮುಖ್ಯ ಎಂದು ಎಲ್ಲರೂ ಮತದಾನ ಮಾಡಿ’ ಎಂದು ಉಪೇಂದ್ರ ಹೇಳಿದ್ದಾರೆ.

ADVERTISEMENT

ಡೈನಾಮಿಕ್ ಸ್ಟಾರ್ ದೇವರಾಜ್, ನಾಗಾಭರಣ, ಅಚ್ಯತಕುಮಾರ್, ಸುಧಾರಾಣಿ, ಶೋಭ್ ರಾಜ್, ವಿಜಯ್ ಭಾರ್ಗವ, ದಿವ್ಯ ಗೌಡ, ತಬಲನಾಣಿ, ಸುಧಾ ಬೆಳವಾಡಿ ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಪ್ರಜಾಪ್ರಭುತ್ವದ ಮಹತ್ವ ಸಾರಲಿರುವ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.