ADVERTISEMENT

ಫ್ಯಾಷನ್ ಕ್ಯಾಲೆಂಡರ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 19:30 IST
Last Updated 18 ಏಪ್ರಿಲ್ 2019, 19:30 IST
ಕಮಾರ್
ಕಮಾರ್   

ಪಡ್ಡೆ ಹುಡುಗರ ಅಚ್ಚುಮೆಚ್ಚಿನ ‘ಎಫ್‌ ಟಿ.ವಿ’ಯ ಭಾರತದ ಹಕ್ಕುಗಳನ್ನು ಪಡೆದಿರುವ ಕಮಾರ್‌ ಫಿಲಂ ಫ್ಯಾಕ್ಟರಿ ಸಂಸ್ಥೆ, ಬೆಂಗಳೂರಿನಲ್ಲಿ ಫ್ಯಾಷನ್‌ ಕ್ಯಾಲೆಂಡರ್‌ ಬಿಡುಗಡೆ ಕಾರ್ಯಕ್ರಮ ಆಯೋಜಿಸಿತ್ತು.

ಕ್ಯಾಲೆಂಡರ್‌ ಬಿಡುಗಡೆ ಕೆಲವು ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ಕೂಡ ನಡೆದಿತ್ತು. ಇದರಲ್ಲಿ ಫ್ಯಾಷನ್‌ ಲೋಕದ ಹಾಗೂ ಸಿನಿಮಾ ಲೋಕದ ಒಂದಿಷ್ಟು ಖ್ಯಾತನಾಮರು ಪಾಲ್ಗೊಂಡಿದ್ದರು. ಅಲ್ಲದೆ, ಕ್ಯಾಲೆಂಡರ್‌ ಬಿಡುಗಡೆಗೂ ಮುನ್ನ ಬೆಡಗಿಯರು ರ‍್ಯಾಂಪ್‌ ಮೇಲೆ ಕ್ಯಾಟ್‌ ವಾಕ್‌ ಪ್ರದರ್ಶಿಸಿದರು!

‘ಅಂತರರಾಷ್ಟ್ರೀಯ ಮಟ್ಟದ ಫ್ಯಾಷನ್‌ ಅನ್ನು ಭಾರತೀಯರಿಗೆ ತೋರಿಸುವ ಕೆಲಸಕ್ಕೆ ಮುಂದಾಗಿದ್ದೇವೆ. ಇದು ಭಾರತದ ಎಲ್ಲ ಪ್ರಮುಖ ನಗರಗಳಲ್ಲೂ ನಡೆಯಲಿದೆ’ ಎಂದರು ಸಂಸ್ಥೆಯ ಮುಖ್ಯಸ್ಥ ಕಮಾರ್.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.