ತೊಂಬತ್ತರ ದಶಕದಲ್ಲಿ ನಡೆದ ನೈಜ ಘಟನೆಯನ್ನೇ ಕಥೆಯಾಗಿ ಹೊಂದಿರುವ ‘ಪ್ರೀತಿಯ ಹುಚ್ಚ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ವಿ.ಕುಮಾರ್ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸಿದ್ದಾರೆ.
‘ಮುಂಬೈನಲ್ಲಿ ಹುಟ್ಟಿದ ಕಥೆಯಿದು.ಕೊರೊನಾಗಿಂತ ಮುಂಚೆ ಈ ಕಥೆಯನ್ನು ಬಹಳಷ್ಟು ನಿರ್ಮಾಪಕರಿಗೆ ಹೇಳಿದೆ. ಅರಸೀಕೆರೆ–ಶ್ರವಣಬೆಳಗೊಳ ನಡುವಿನ ಹಳ್ಳಿಯಲ್ಲಿ ನಡೆದ ನೈಜ ಘಟನೆಯೇ ಸಿನಿಮಾವಾಗಿದೆ. ದಲಿತ ಯುವತಿಯೊಬ್ಬಳನ್ನು ಮದುವೆಯಾದ ಬಳಿಕ ಆಕೆಯ ಪತಿಯ ಮನೆಯಲ್ಲಿ ಹೇಗೆ ನಡೆಸಿಕೊಂಡರು, ಆಕೆ ಹೇಗೆ ಮುಂಬೈನ ಕಾಮಾಟಿಪುರ ಸೇರುವಂತೆ ಆಯಿತು ಎಂಬ ಕರುಣಾಜನಕ ಕಥೆಯಿದೆ. ಶೀಘ್ರದಲ್ಲಿ ಚಿತ್ರ ತೆರೆಗೆ ಬರಲಿದೆ’ ಎಂದರು ನಿರ್ದೇಶಕರು.
ನಾಯಕ ವಿಜಯ್‌ಗೆ ಮುಂಬೈ ಮೂಲದ ಕುಂಕುಮ್ ಹರಿಹರ ಜೋಡಿಯಾಗಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಶಶಿ ರಂಗರಾಜನ್ ಸಂಗೀತವಿದೆ. ಸುನಿಲ್ ಕೆ.ಆರ್.ಎಸ್. ಛಾಯಾಚಿತ್ರಗ್ರಹಣ, ಪ್ರವೀಣ್ ವಿಷ್ಣು ಸಂಕಲನವಿದೆ. ಈ ಚಿತ್ರ ಬೆಂಗಳೂರು, ಮಂಡ್ಯ, ಚಿಕ್ಕಮಗಳೂರು, ಹಾಸನ, ಶ್ರವಣಬೆಳಗೊಳ ಹಾಗೂ ಮುಂಬೈನಲ್ಲಿ ಚಿತ್ರೀಕರಣಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.