ADVERTISEMENT

ನಡಿಗೆ, ಯೋಗವೇ ಫಿಟ್‌ನೆಸ್‌ ಗುಟ್ಟು

ಸ್ಟಾರ್‌ ಡಯೆಟ್‌

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2018, 19:30 IST
Last Updated 6 ಆಗಸ್ಟ್ 2018, 19:30 IST
ಯಾಮಿ ಗೌತಮ್‌
ಯಾಮಿ ಗೌತಮ್‌   

ಸಿನಿಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಮೊದಲ ಚಿತ್ರದಲ್ಲೇ ಜನಪ್ರಿಯತೆ ಗಳಿಸಿದವರಲ್ಲಿ ನಟಿ ಯಾಮಿ ಗೌತಮ್‌ ಕೂಡ ಒಬ್ಬರು. ಕನ್ನಡದ ‘ಉಲ್ಲಾಸ ಉತ್ಸಾಹ’ ಚಿತ್ರದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಜೊತೆ ನಾಯಕಿಯಾಗಿ ನಟಿಸಿರುವಯಾಮಿ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಪಂಜಾಬಿ ಚಿತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್‌ನ ‘ಕಾಬಿಲ್‌’ ಚಿತ್ರದಲ್ಲಿ ಹೃತಿಕ್‌ ರೋಷನ್‌ಗೆ ನಾಯಕಿಯಾಗಿ ನಟಿಸಿರುವ ಇವರು, ತಮ್ಮ ಅಂದ‍ಕಾಪಾಡಿಕೊಳ್ಳಲು ಸಾಕಷ್ಟು ವರ್ಕೌಟ್‌ ಮಾಡುತ್ತಾರೆ.

ಯಾಮಿ ಪ್ರತಿದಿನ ಜಾಗಿಂಗ್‌ ಮಾಡುತ್ತಾರೆ. ಇದರಿಂದ ತಾಜಾ ಗಾಳಿ ಸಿಗುತ್ತದೆ, ಹಾಗೇ ದಿನಾಪೂರ್ತಿ ಚೈತನ್ಯದಿಂದಿರಲು, ಮನಸ್ಸು ಹಾಗೂ ದೇಹವನ್ನು ಒತ್ತಡದಿಂದ ಮುಕ್ತಗೊಳಿಸಿ ಶಾಂತವಾಗಿಟ್ಟುಕೊಳ್ಳಲು ಬೆಳಗ್ಗಿನ ನಡಿಗೆ ಸಹಾಯಕ. ಹಾಗೇ ಬೆಳಗ್ಗಿನ ಆಲಸ್ಯ ದೂರವಾಗಿ, ಸಕಾರಾತ್ಮಕವಾಗಿ ದಿನ ಆರಂಭಿಸಬಹುದುಎನ್ನುತ್ತಾರೆ ಇವರು.

ಯಾಮಿ ಯೋಗಪ್ರಿಯೆ. ಪ್ರತಿನಿತ್ಯ ಕಠಿಣ ಯೋಗಾಸನಗಳನ್ನು ಮಾಡುತ್ತಾರೆ. ಇದರಿಂದ ದೇಹ ಹೆಚ್ಚಿನ ಟಾಕ್ಸಿನ್‌ ಹಾಗೂ ಕೊಬ್ಬನ್ನು ಹೊರಹಾಕುತ್ತದೆ. ಯೋಗ ಕಲಿಯುವುದು ಫಿಟ್‌ನೆಸ್‌ ಹಾಗೂ ಆರೋಗ್ಯ ಕಾಯ್ದುಕೊಳ್ಳಲು ಇರುವ ಉತ್ತಮ ಮಾರ್ಗ. ವ್ಯಾಯಾಮ, ಜಿಮ್‌ಗೆ ಹೋಗಲು ಇಷ್ಟಪಡದವರು ಯೋಗಾಭ್ಯಾಸ ಮಾಡಿದರೆ ಉತ್ತಮ ಎನ್ನುವುದು ಅವರ ಸಲಹೆ. ಇದಲ್ಲದೇ ವಾರಕ್ಕೆ ನಾಲ್ಕು ದಿನ ಜಿಮ್‌ನಲ್ಲೂ ಯಾಮಿ ಬೆವರಿಳಿಸುತ್ತಾರಂತೆ.

ADVERTISEMENT

ವರ್ಕೌಟ್‌, ಯೋಗ, ನಡಿಗೆಯಿಂದ ಫಿಟ್‌ನೆಸ್‌ ಕಾಯ್ದುಕೊಳ್ಳಲು ಆಗಲ್ಲ, ಇದಕ್ಕೆ ಸರಿಯಾದ ಆಹಾರಕ್ರಮವೂ ಮುಖ್ಯ ಎಂಬುದು ಯಾಮಿ ಮಾತು. ಇವರ ದಿನದ ಆಹಾರದಲ್ಲಿ ದಾಳಿಂಬೆ ಹಾಗೂ ಬಾಳೆಹಣ್ಣು ಜ್ಯೂಸ್‌ ಇದ್ದೇ ಇರುತ್ತದೆ. ದಾಳಿಂಬೆ ಜ್ಯೂಸ್‌ ಕುಡಿಯುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.ಇದು ರಕ್ತದೊತ್ತಡವನ್ನು ಕಡಿಮೆ ಮಾಡುವುದಲ್ಲದೇ ಹೃದಯದ ಆರೋಗ್ಯಕ್ಕೂ ಉತ್ತಮ. ಬಾಳೆಹಣ್ಣು ದೇಹದ ಶಕ್ತಿ ಹೆಚ್ಚಿಸಿ, ಚರ್ಮಕ್ಕೆ ಹೊಳಪು ನೀಡುತ್ತದೆ ಎನ್ನುತ್ತಾರೆ ಅವರು.

ಪ್ರೊಟೀನ್‌ಯುಕ್ತ ಆಹಾರ ಸೇವನೆಗೆ ಹೆಚ್ಚು ಪ್ರಾಶಸ್ತ್ಯ ನೀಡುವ ಅವರು ಮೊಟ್ಟೆ, ಮೀನು, ಕೋಳಿ ಖಾದ್ಯಗಳನ್ನು ಸೇವಿಸುತ್ತಾರೆ. ದಿನದ ಒಂದು ಹೊತ್ತಾದರೂ ಮೊಟ್ಟೆಯ ಬಿಳಿ ಭಾಗ ಅಥವಾ ಮಾಂಸ ಖಾದ್ಯ ಸೇವಿಸುತ್ತಾರಂತೆ. ಇವರಿಗೆ ಬಾದಾಮಿ ಸೇವಿಸುವುದು ಅಂದ್ರೆ ತುಂಬ ಇಷ್ಟ. ಇದರಿಂದ ದೇಹದ ಶಕ್ತಿ ಹೆಚ್ಚುತ್ತದೆ. ಹಾಗೇ ಕೂದಲು ಹಾಗೂ ಚರ್ಮದ ಕಾಳಜಿಗೂ ಉತ್ತಮ. ಬೆಳಿಗ್ಗೆ ಖಾಲಿ ಹೊಟ್ಟೆಗೆ ನೆನೆಸಿಟ್ಟು, ಸಿಪ್ಪೆ ತೆಗೆದ ಬಾದಾಮಿ ತಿಂದರೆ ಉತ್ತಮ. ಹಸಿವಾದಾಗ ಬಾದಾಮಿ ತಿಂದರೆ ಹೆಚ್ಚು ಹಸಿವಾಗುವುದಿಲ್ಲ. ತಿನ್ನುವ ಆಹಾರದ ಪ್ರಮಾಣ ಕಡಿಮೆಯಾಗಿ ತೂಕವೂ ಕಡಿಮೆಯಾಗುತ್ತದೆ ಎನ್ನುವುದು ಯಾಮಿ ಅನುಭವದ ಮಾತು.

ಚಿತ್ರೀಕರಣ, ಕಾರ್ಯಕ್ರಮಕ್ಕಾಗಿ ಹೊರಗಡೆ ಹೋಗಿದ್ದಾಗ ಯಾಮಿ ಜಂಕ್‌ಫುಡ್‌ ಅಥವಾ ಹೊರಗಿನ ತಿಂಡಿಗಳನ್ನು ತಿನ್ನುವುದಿಲ್ಲ. ಯಾವಾಗಲೂ ತಾಜಾ ಹಣ್ಣುಗಳನ್ನು ತಿನ್ನುತ್ತಾರೆ. ಚಿತ್ರೀಕರಣವಿದ್ದಾಗ ಮನೆಯಲ್ಲಿ ಸಲಾಡ್‌ ಮಾಡಿಕೊಂಡು ಹೋಗುತ್ತಾರೆ. ತಾಜಾ ಹಣ್ಣು ಹಾಗೂ ತರಕಾರಿಗಳು ಆರೋಗ್ಯವನ್ನು ಕಾಪಾಡುತ್ತದೆ ಎನ್ನುತ್ತಾರೆ.

ಹುಟ್ಟುಹಬ್ಬ: 28 ನವೆಂಬರ್‌ 1988
ಎತ್ತರ: 5 ಅಡಿ 3 ಇಂಚು
ತೂಕ: 50 ಕೆ.ಜಿ
ಸುತ್ತಳತೆ: 33–25–33

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.