ADVERTISEMENT

ಗಣೇಶ್‌ ಅಭಿನಯದ ‘99’ ಚಿತ್ರ 26ಕ್ಕೆ ಬಿಡುಗಡೆ

ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯ 100ನೇ ಚಿತ್ರ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 9:19 IST
Last Updated 13 ಏಪ್ರಿಲ್ 2019, 9:19 IST
‘99’ ಚಿತ್ರದಲ್ಲಿ ಭಾವನಾ ಮತ್ತು ಗಣೇಶ್‌
‘99’ ಚಿತ್ರದಲ್ಲಿ ಭಾವನಾ ಮತ್ತು ಗಣೇಶ್‌   

‘ಗೋಲ್ಡನ್‌ ಸ್ಟಾರ್’ ಗಣೇಶ್‌ ಮತ್ತು ನಟಿ ಭಾವನಾ ಜೊತೆಯಾಗಿ ನಟಿಸಿರುವ ‘99’ ಸಿನಿಮಾ ಇದೇ 26ರಂದು ಬಿಡುಗಡೆಯಾಗಲಿದೆ. ಇದು ಕಳೆದ ವರ್ಷ ತೆರೆಕಂಡ ತಮಿಳಿನ ‘96’ ಚಿತ್ರದ ರಿಮೇಕ್. ಸೇತುಪತಿ ಮತ್ತು ತ್ರಿಶಾ ನಟಿಸಿದ್ದ ಈ ಚಿತ್ರ ಸೂಪರ್‌ ಹಿಟ್‌ ಆಗಿತ್ತು.

ಕಳೆದ ವರ್ಷ ಗಣೇಶ್‌ ನಟನೆಯ ‘ಆರೆಂಜ್‌’ ಚಿತ್ರ ಬಿಡುಗಡೆಯಾಗಿತ್ತು. ಆದರೆ, ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿರಲಿಲ್ಲ. ಇದು ಈ ವರ್ಷ ಬಿಡುಗಡೆಯಾಗುತ್ತಿರುವ ಗೋಲ್ಡನ್‌ ಸ್ಟಾರ್‌ ಅವರ ಮೊದಲ ಸಿನಿಮಾ. ಪ್ರೀತಮ್‌ ಗುಬ್ಬಿ ಈ ಚಿತ್ರ ನಿರ್ದೇಶಿಸಿದ್ದಾರೆ. ಅಂದಹಾಗೆಗಣೇಶ್‌ ನಟಿಸಿದ್ದ ‘ಮಳೆಯಲಿ ಜೊತೆಯಲಿ’, ‘ದಿಲ್ ರಂಗೀಲಾ’ ಚಿತ್ರಕ್ಕೂ ಪ್ರೀತಮ್‌ ಅವರೇ ಆಕ್ಷನ್‌ ಕಟ್‌ ಹೇಳಿದ್ದರು. ‘99’ ಮೂಲಕ ಈ ಜೋಡಿ ಮತ್ತೆ ಒಂದಾಗಿದೆ.

‘ರೋಮಿಯೊ’ ಚಿತ್ರದ ಬಳಿಕ ಭಾವನಾ ಅವರು ಗಣೇಶ್‌ಗೆ ಮತ್ತೆ ಜೊತೆಯಾಗಿದ್ದಾರೆ. ಈಗಾಗಲೇ,ಚಿತ್ರದ ಹಾಡುಗಳು ಅಭಿಮಾನಿಗಳಿಗೆ ರಸದೌತಣ ಉಣಬಡಿಸಿವೆ. ಅರ್ಜುನ್‌ ಜನ್ಯ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಅಂದಹಾಗೆ ಇದು ಅವರು ಸಂಗೀತ ಸಂಯೋಜನೆಯ ನೂರನೇ ಚಿತ್ರ ಎನ್ನುವುದು ವಿಶೇಷ.

ADVERTISEMENT

ಈ ಚಿತ್ರಕ್ಕೆ ರಾಮು ಆರ್ಥಿಕ ಇಂಧನ ಒದಗಿಸಿದ್ದಾರೆ. ಸಂತೋಜ್‌ ರೈ ಪತಾಜೆ ಅವರ ಛಾಯಾಗ್ರಹಣವಿದೆ.

ಗಣೇಶ್‌ ನಟಿಸಿರುವ ‘ಗಿಮಿಕ್‌’ ಚಿತ್ರ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಬಹುನಿರೀಕ್ಷಿತ ‘ಗೀತಾ’ ಮತ್ತು‘ವೇರ್‌ ಈಸ್ ಮೈ ಕನ್ನಡಕ’ ಚಿತ್ರದ ಶೂಟಿಂಗ್‌ ಕೂಡ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.