ADVERTISEMENT

ಜೀ5 ನಲ್ಲಿ 'ಪಾಯಿಸನ್‌ 2’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 6:13 IST
Last Updated 8 ಅಕ್ಟೋಬರ್ 2020, 6:13 IST
ಪಾಯಿಸನ್‌ 2 ಪೋಸ್ಟರ್‌
ಪಾಯಿಸನ್‌ 2 ಪೋಸ್ಟರ್‌   

ಕ್ರೈಮ್‌ ಥ್ರಿಲ್ಲರ್‌ ಕತೆಯಾಧಾರಿತ ಹಿಂದಿ ವೆಬ್‌ಸರಣಿ ‘ಪಾಯಿಸನ್‌ 2’. ಅಫ್ತಾಬ್ ಶಿವದಾಸಾನಿ ಹಾಗೂ ಲಕ್ಷ್ಮಿ ರೈ ಈ ಸರಣಿಯಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಸರಣಿಯು ಜೀ 5ನಲ್ಲಿ ಅಕ್ಟೋಬರ್‌ 16 ರಂದು ಬಿಡುಗಡೆಯಾಗಲಿದೆ.

ವಿಶಾಲ್‌ ಪಾಂಡೆ ನಿರ್ದೇಶನದ ವೆಬ್‌ಸರಣಿಗೆ ಪನೋರಮಾ ಎಂಟರ್‌ಟ್ರೈನ್‌ಮೆಂಟ್ ಹಾಗೂ ಬಾಂಬೆ ಮಿಡಿಯಾ ವರ್ಕ್ಸ್‌ ಬಂಡವಾಳ ಹೂಡಿಕೆ ಮಾಡಿದ್ದಾರೆ.ಅಫ್ತಾಭ್ ಈ ಸರಣಿಯ ಮೂಲಕ ಡಿಜಿಟಲ್‌ ವೇದಿಕೆಗೆ ಹೆಜ್ಜೆ ಇರಿಸುತ್ತಿದ್ದಾರೆ. ಇದು ಒಟ್ಟು 10 ಎಪಿಸೋಡ್‌ಗಳ ಕತೆಯಾಗಿದೆ.

‘ಪಾಯಿಸನ್‌ 1’ರ ಯಶಸ್ಸು ‘ಪಾಯಿಸನ್‌ 2’ ಸರಣಿ ತರಲು ಸ್ಫೂರ್ತಿಯಾಗಿದೆ ಎನ್ನಲಾಗುತ್ತಿದೆ. ಪಾಯಿಸನ್‌ 2 ಸಂಪೂರ್ಣವಾಗಿ ಸೇಡಿನ ಕತೆಯನ್ನು ಹೊಂದಿದೆ.

ADVERTISEMENT

ಏಪ್ರಿಲ್‌ 30ಕ್ಕೆ ಈ ವೆಬ್‌ಸರಣಿ ಬಿಡುಗಡೆಯಾಗಬೇಕಿದ್ದು ಲಾಕ್‌ಡೌನ್‌ ಕಾರಣದಿಂದ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿತ್ತು. ಇದರ ಟ್ರೇಲರ್‌ ಸೆಪ್ಟೆಂಬರ್‌ 29 ರಂದು ಬಿಡುಗಡೆಯಾಗಿತ್ತು.

ಪೂಜಾ ಚೋಪ್ರಾ, ರಾಹುಲ್‌ ದೇವ್‌, ವಿನ್ ರಾನಾ, ಝೈನ್ ಇಮಾಮ್‌, ಅಸ್ಮಿತಾ ಸೂದ್‌, ಕರಣ್ ವೀರ್ ಮೆಹ್ರಾ, ಜಾಯ್ ಸೇನ್‌ಗುಪ್ತಾ, ಪವನ್‌ ಚೋಪ್ರಾ, ಗೌರವ್ ಶರ್ಮಾ, ತೆಹರ್‌ ಶಬ್ಬೀರ್‌, ಸಾಕ್ಷಿ ಪ್ರಧಾನ ಮುಂತಾದವರು ಈ ವೆಬ್‌ಸರಣಿಯಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.