ADVERTISEMENT

ಮತ್ತೆ ಬಣ್ಣ ಹಚ್ಚಲಿರುವ ‘ಜೋಗಿ’ ಪ್ರೇಮ್‌

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 4:34 IST
Last Updated 22 ಅಕ್ಟೋಬರ್ 2020, 4:34 IST
ಜೋಗಿ ಪ್ರೇಮ್‌ ನಟನೆಯ ಹೊಸ ಚಿತ್ರದ ಪೋಸ್ಟರ್‌
ಜೋಗಿ ಪ್ರೇಮ್‌ ನಟನೆಯ ಹೊಸ ಚಿತ್ರದ ಪೋಸ್ಟರ್‌   

‘ಜೋಗಿ’ ಸಿನಿಮಾ ಖ್ಯಾತಿಯ ನಿರ್ದೇಶಕ, ನಟ ಹಾಗೂ ನಿರ್ಮಾಪಕ ಪ್ರೇಮ್‌ ಮತ್ತೆ ಬಣ್ಣ ಹಚ್ಚಲಿದ್ದು,ಅ.22ರಂದುಅವರ ಹುಟ್ಟುಹಬ್ಬದ ನಿಮಿತ್ತ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಲು ಸಜ್ಜಾಗಿದ್ದಾರೆ.

ಎಂ.ಎಸ್.ಆರ್. ಪ್ರೊಡಕ್ಷನ್ನಿನ ನೂತನ ಚಿತ್ರದಲ್ಲಿ ಜೋಗಿ ಪ್ರೇಮ್ ನಾಯಕನಾಗಿ ನಟಿಸಲಿದ್ದಾರೆ. ಪ್ರೇಮ್ ಹುಟ್ಟುಹಬ್ಬಕ್ಕೆ ಚಿತ್ರತಂಡ ಮುಂಚಿತವಾಗಿಯೇ ಶುಭಕೋರಿ ಈ ಸುದ್ದಿಯನ್ನು ಹಂಚಿಕೊಂಡಿದ್ದು, ಪೋಸ್ಟರ್ ಬಿಡುಗಡೆ ಮಾಡಿದೆ.

ಚಿತ್ರದ ಶೀರ್ಷಿಕೆ ಸೇರಿದಂತೆ ಕಲಾವಿದರು ಹಾಗೂ ತಂತ್ರಜ್ಞರ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.

ADVERTISEMENT

ಸದ್ಯ ಪ್ರೇಮ್‌ ‘ಏಕ್‌ ಲವ್‌ ಯಾ’ ಸಿನಿಮಾ ನಿರ್ದೇಶಿಸುತ್ತಿದ್ದು, ಈ ಚಿತ್ರದಲ್ಲಿ ಪ್ರೇಮ್‌ ಅವರ ಭಾವಮೈದ ರಾಣಾ ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಪ್ರೇಮ್‌ ಪತ್ನಿ ರಕ್ಷಿತಾ ನಿರ್ಮಾಪಕಿಯಾಗಿದ್ದಾರೆ. ರಚಿತಾ ರಾಮ್‌, ರೀಷ್ಮಾ, ರಕ್ಷಿತಾ, ಶಶಿಕುಮಾರ್‌, ಚರಣ್‌ ರಾಜ್‌, ಅಂಕಿತಾ ನಾಯ್ಕ್‌ ಅವರ ತಾರಾಗಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.