ADVERTISEMENT

ಮೇ 3ಕ್ಕೆ ‘ಕಾಂಗರೂ’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2024, 20:43 IST
Last Updated 30 ಏಪ್ರಿಲ್ 2024, 20:43 IST
ಆದಿತ್ಯ, ರಂಜನಿ ರಾಘವನ್‌ 
ಆದಿತ್ಯ, ರಂಜನಿ ರಾಘವನ್‌    

ಕಿಶೋರ್ ಮೇಗಳಮನೆ ನಿರ್ದೇಶನದಲ್ಲಿ ‘ಡೆಡ್ಲಿ ಸೋಮ’ ಖ್ಯಾತಿಯ ಆದಿತ್ಯ ನಾಯಕರಾಗಿ ನಟಿಸಿರುವ ‘ಕಾಂಗರೂ’ ಚಿತ್ರ ಮೇ 3ರಂದು 150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 

ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ನಾಯಕಿಯಾಗಿ ರಂಜನಿ ರಾಘವನ್ ಅಭಿನಯಿಸಿದ್ದಾರೆ. ಈ ಚಿತ್ರದ ಕಥೆಗೆ ‘ಯೂ ಟರ್ನ್‌’ ಸಿನಿಮಾ ಸ್ಫೂರ್ತಿ ಎಂದಿರುವ ಕಿಶೋರ್‌, ‘ಒಂದು ಸಣ್ಣ ತಪ್ಪಿನಿಂದ ಮುಂದೆ ಏನೇನೆಲ್ಲ ಆಗಬಹುದೆಂದು ಚಿತ್ರದಲ್ಲಿ ತೋರಿಸಿದ್ದೇವೆ’  ಎಂದರು. 

‘ಥ್ರಿಲ್ಲರ್‌, ಹಾರರ್‌ ಅಂಶಗಳು ಈ ಸಿನಿಮಾದಲ್ಲಿವೆಯಾದರೂ ಇದೊಂದು ಪಕ್ಕಾ ಭಾವನಾತ್ಮಕ ಸಿನಿಮಾ. ‘ಡೆಡ್ಲಿ ಸೋಮ’ ಸಿನಿಮಾವನ್ನು ತನ್ನ ಸಂಗೀತದಿಂದಲೇ ಸಾಧು ಕೋಕಿಲ ಅವರು ಬೇರೆ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದರು. ಈ ಸಿನಿಮಾಗೂ ಅವರದ್ದೇ ಸಂಗೀತವಿದೆ. ನಾನು ಈ ಚಿತ್ರದಲ್ಲಿ ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಮೇ 4 ನನ್ನ ಜನ್ಮದಿನ. ಮೇ 3 ರಂದು ನಮ್ಮ ಚಿತ್ರ ಬಿಡುಗಡೆಯಾಗಲಿದೆ’ ಎಂದರು ಆದಿತ್ಯ. ‘ಒಬ್ಬ ಪ್ರೇಕ್ಷಕಳಾಗಿ ನಾನು ಸಿನಿಮಾವನ್ನು ನೋಡಿದ್ದೇನೆ. ನಿರ್ದೇಶಕರು ಪ್ರತಿ ಪಾತ್ರವನ್ನು ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ’ ಎನ್ನುತ್ತಾರೆ ರಂಜನಿ ರಾಘವನ್‌. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.