ADVERTISEMENT

ಹಾಸ್ಯನಟ ಮೈಕಲ್ ಮಧು ನಿಧನ

​ಪ್ರಜಾವಾಣಿ ವಾರ್ತೆ
Published 13 ಮೇ 2020, 17:24 IST
Last Updated 13 ಮೇ 2020, 17:24 IST
   

ಬೆಂಗಳೂರು:ಅನಾರೋಗ್ಯದಿಂದ ಬಳಲುತ್ತಿದ್ದಹಾಸ್ಯನಟ ಮೈಕಲ್ ಮಧು ಅವರು ಬುಧವಾರರಾತ್ರಿ ಮೃತಪಟ್ಟಿದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿತ್ತು.

ಮಧು ಇಂದು ಮಧ್ಯಾಹ್ನ ಊಟ ಮಾಡಿದ ಬಳಿಕ ಇದ್ದಕ್ಕಿದ್ದಂತೆ ಕುಸಿದುಬಿದ್ದರು.ಕೂಡಲೇ ಅವರನ್ನು ನಗರದ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಓಂ, ಎಕೆ 47, ಸೂರ್ಯವಂಶ, ನೀಲಾಂಬರಿ, ಯಮಲೋಕದಲ್ಲಿ ವೀರಪ್ಪನ್,ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು, ಸುಪ್ರಭಾತ, ಮಿನುಗುತಾರೆ, ಪಾಪಿಗಳ ಲೋಕದಲ್ಲಿಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು.

ADVERTISEMENT

ನೃತ್ಯ ನಿರ್ದೇಶಕರಾಗುವ ಕನಸು ಕಂಡಿದ್ದ ಮಧು ಬಳಿಕ ನಟರಾಗಿದ್ದರು.ಚೆನ್ನಾಗಿ ನೃತ್ಯ ಮಾಡುತ್ತಾರೆ ಎಂಬ ಕಾರಣಕ್ಕೆ ಅವರ ಹೆಸರಿನ ಮುಂದೆ ‘ಮೈಕಲ್‌’ (ಖ್ಯಾತ ಪಾಪ್‌ಗಾಯಕ ಮೈಕಲ್‌ ಜಾಕ್ಸನ್‌ ಅವರ ಹೆಸರಿನ ಮೊದಲ ಪದ) ಸೇರಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.