ಕನ್ನಡದಲ್ಲಿ ಆಗೀಗ ಪ್ರಯೋಗಾತ್ಮಕ ಚಿತ್ರಗಳು ಬರುತ್ತಿರುತ್ತವೆ. ಅದೇ ಸಾಲಿಗೆ ಸೇರುವ ಚಿತ್ರ ಸಾರಂಗಿ. ಕೇವಲ ಎರಡೇ ಪಾತ್ರಗಳನ್ನು ಹೊಂದಿರುವ ಚಿತ್ರಕ್ಕೆ ಜೆ.ಆಚಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
‘ಮನುಷ್ಯ ದಿನ ಬೆಳಗಾದರೆ ಎಲ್ಲರ ಮುಂದೆ ಒಂದೊಂದು ತರಹದ ಮುಖವಾಡ ಧರಿಸಿ ಜೀವನ ನಡೆಸುತ್ತಿರುತ್ತಾನೆ. ಆದರೆ, ಒಂದು ಅನಿರೀಕ್ಷಿತ ಸನ್ನಿವೇಶ ಎದುರಾದಾಗ ನಾವು ನಮ್ಮ ಮೌಲ್ಯಗಳನ್ನು ಉಳಸಿಕೊಳ್ಳುತ್ತೇವಾ? ಅದರಿಂದ ಹೇಗೆ ಪಾರಾಗುತ್ತೇವೆ? ಎಂಬುದೇ ಚಿತ್ರದ ಕಥಾಸಾರಾಂಶ. ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಿದು. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಮೊದಲು ಅಮೆರಿಕದಲ್ಲಿ ಬಿಡುಗಡೆ ಮಾಡಿ, ಅಕ್ಟೋಬರ್ ವೇಳೆಗೆ ಕರ್ನಾಟಕದಲ್ಲಿ ತೆರೆಗೆ ತರುವ ಯೋಚನೆಯಿದೆ’ ಎಂದರು ನಿರ್ದೇಶಕರು.
ಕಾರ್ತಿಕ್ ಚಂದರ್ ಹಾಗೂ ಶ್ವೇತ ಅರಕೆರೆ ಚಿತ್ರದಲ್ಲಿನ ಕಲಾವಿದರು. ‘ನಾನು ರಂಗಭೂಮಿ ಕಲಾವಿದ. ಅಮೆರಿಕದಲ್ಲಿ ರಂಗಭೂಮಿ ನಡೆಸುತ್ತಿದ್ದೆ. ಈಗ ಬೆಂಗಳೂರಿನಲ್ಲಿ ವಾಸವಿದ್ದೇನೆ. ‘ಸಾರಂಗಿ’ ಒಂದು ಬೆಟ್ಟದ ಹೆಸರು. ಬೆಟ್ಟದ ಸುತ್ತ ಏನೆಲ್ಲಾ ನಡೆಯುತ್ತದೆ ಎಂಬುದನ್ನು ನಿರ್ದೇಶಕರು ಇದರಲ್ಲಿ ತೋರಿಸಿದ್ದಾರೆ’ ಎಂದು ಕಾರ್ತಿಕ್ ಹೇಳಿದರು.
ತೇಜೇಶ್ ಬಂಡವಾಳ ಹೂಡಿದ್ದಾರೆ. ನವಿ ನಂಜಪ್ಪ ಛಾಯಾಚಿತ್ರಗ್ರಹಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.