ADVERTISEMENT

‘ಎಲ್ಲೋ ಜೋಗಪ್ಪ’ ಎನ್ನುತ್ತ ಹೊರಟ ಹಯವದನ್‌!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜನವರಿ 2023, 14:06 IST
Last Updated 30 ಜನವರಿ 2023, 14:06 IST
   

ಕಮಲಿ, ಅಗ್ನಿಸಾಕ್ಷಿ, ನಾಗಿಣಿಯಂತಹ ಜನಪ್ರಿಯ ಧಾರಾವಾಹಿಗಳನ್ನು ನಿರ್ದೇಶಿಸಿದ್ದ ಹಯವದನ್‌ ಸಿನಿಮಾದತ್ತ ಹೊರಳಿದ್ದಾರೆ. ಚಿತ್ರದ ಶೀರ್ಷಿಕೆಯೊಂದಿಗೆ ಮೊದಲ ಪೋಸ್ಟರ್‌ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

‘ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರದ ಶೀರ್ಷಿಕೆ. ‘ಕಂಬ್ಳಿಹುಳ’ ಚಿತ್ರದಲ್ಲಿ ನಾಯಕನಾಗಿದ್ದ ಅಂಜನ್‌ ನಾಗೇಂದ್ರ ಈ ಚಿತ್ರದ ನಾಯಕ. ಪವನ್‌ ಶಿಮಿಕೇರಿ ಮತ್ತು ಸಿಂಧು ಹಯವದನ್‌ ಚಿತ್ರದ ನಿರ್ಮಾಪಕರು. ಶಿವಪ್ರಸಾದ್‌ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

‘ತಂದೆ ಮಗನ ಜನರೇಷನ್‌ ಗ್ಯಾಪ್‌ನ ಗುದ್ದಾಟ. ನವೀರಾದ ಪ್ರೇಮಕಥೆ’ ಎಂದು ಹಯವದನ್‌ ತಮ್ಮ ಚಿತ್ರದ ಕುರಿತು ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಏನನ್ನೋ ಹುಡುಕಿಕೊಂಡು ಬುದ್ಧ ಗಯಾದತ್ತ ಹೋಗುವ ಹುಡುಗನ ಕಥೆ ಎಂಬುದನ್ನು ನವೀರಾದ ಪೋಸ್ಟರ್‌ ಹೇಳುತ್ತಿದೆ.

ADVERTISEMENT

ಡಾಲಿ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಮೊದಲಾದ ಚಿತ್ರಕ್ಕೆ ಸಂಭಾಷಣೆ ರಚಿಸಿದ್ದ ವೇಣು ಹಸ್ರಾಳಿ ಸಂಭಾಷಣೆ ಬರೆದಿದ್ದಾರೆ. ಮುಂದಿನ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಬೆಂಗಳೂರು ಸೇರಿದಂತೆ ದೇಶದ ಬೇರೆ ಬೇರೆ ಜಾಗಗಳಲ್ಲಿ ಚಿತ್ರೀಕರಣ ನಡೆಯಲಿದೆ. ಇದೊಂದು ಪ್ರಯಾಣದ ಕಥೆ ಎಂದು ಚಿತ್ರತಂಡ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.