ADVERTISEMENT

‘ಪೌಡರ್‌’ ಬಿಡುಗಡೆ ಮತ್ತೆ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 23:51 IST
Last Updated 29 ಜುಲೈ 2024, 23:51 IST
ಪೌಡರ್‌ 
ಪೌಡರ್‌    

ಆಗಸ್ಟ್‌ 9ರಂದು ‘ಭೀಮ’ ಹಾಗೂ 15ರಂದು ‘ಗೌರಿ’, ‘ಕೃಷ್ಣಂ ಪ್ರಣಯ ಸಖಿ’–ಹೀಗೆ ಕನ್ನಡ ಸೇರಿದಂತೆ ಪರಭಾಷೆಗಳ ಹತ್ತಕ್ಕೂ ಅಧಿಕ ಸಿನಿಮಾಗಳು ತೆರೆಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಆ.15ರಂದು ಬಿಡುಗಡೆಯಾಗಬೇಕಿದ್ದ ‘ಪೌಡರ್‌’ ಸಿನಿಮಾವನ್ನು ಚಿತ್ರತಂಡ ಮುಂದೂಡಿದೆ. 

ಆ.15ರ ಬದಲಾಗಿ ಆ.23ರಂದು ‘ಪೌಡರ್’ ಸಿನಿಮಾ ರಿಲೀಸ್‌ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಜನಾರ್ದನ್ ಚಿಕ್ಕಣ್ಣ ನಿರ್ದೇಶಿಸಿರುವ ದಿಗಂತ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಎರಡನೇ ಬಾರಿ ಮುಂದೂಡಲ್ಪಟ್ಟಿದೆ. ಜುಲೈ 12ರಂದೇ ಸಿನಿಮಾ ಬಿಡುಗಡೆಯಾಗಬೇಕಿತ್ತು. ಜೂನ್‌ ಅಂತ್ಯದಲ್ಲಿ ಆಗಸ್ಟ್‌ 15ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿತ್ತು. ‘ಒಂದೇ ದಿನ ಹೆಚ್ಚು ಸಿನಿಮಾಗಳು ಬಿಡುಗಡೆಯಾದರೆ ಬಾಕ್ಸ್‌ ಆಫೀಸ್‌ನಲ್ಲಿ ಕ್ಲ್ಯಾಷ್‌ ಆಗಲಿದೆ. ಇದರಿಂದ ಸಿನಿಮಾದ ಗಳಿಕೆ ಮೇಲೆಯೂ ಪರಿಣಾಮ ಬೀರಲಿದೆ. ಮೊದಲೇ ಕನ್ನಡ ಚಿತ್ರರಂಗದ ಸ್ಥಿತಿ ಶೋಚನೀಯವಾಗಿದೆ. ಇಂತಹ ಸಂದರ್ಭದಲ್ಲಿ ಬಾಕ್ಸ್‌ ಆಫೀಸ್‌ ವಾರ್ ಬೇಡ ಎಂಬುದನ್ನು ಅರಿತು ಚಿತ್ರ ಬಿಡುಗಡೆ ಮುಂದೂಡಿದ್ದೇವೆ’ ಎಂದು ಸಿನಿಮಾ ನಿರ್ಮಾಣ ಸಂಸ್ಥೆಯಾದ ಕೆಆರ್‌ಜಿ ತಿಳಿಸಿದೆ. 

‘ಪೌಡರ್‌’ ಚಿತ್ರದಲ್ಲಿ ದಿಗಂತ್, ಧನ್ಯ ರಾಮ್‌ಕುಮಾರ್, ಅನಿರುದ್ಧ್ ಆಚಾರ್ಯ, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.