ADVERTISEMENT

ಕೊನೆಯ ಹಂತದಲ್ಲಿ ‘ದಿಲ್‌ದಾರ್‌’

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 22:50 IST
Last Updated 4 ಜುಲೈ 2025, 22:50 IST
ಶ್ರೇಯಸ್‌ ಮಂಜು
ಶ್ರೇಯಸ್‌ ಮಂಜು   

ಶ್ರೇಯಸ್ ಮಂಜು ನಾಯಕನಾಗಿ ನಟಿಸುತ್ತಿರುವ ‘ದಿಲ್‌ದಾರ್‌’ ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಮಧು ಗೌಡ ನಿರ್ದೇಶನದ ಚಿತ್ರವಿದು. 

‘ತಂದೆ ಕೆ.ಮಂಜು ನಿರ್ಮಾಣದಲ್ಲಿ, ಎಸ್.ನಾರಾಯಣ್ ನಿರ್ದೇಶಿಸಿರುವ ‘ಮಾರುತ’ ಚಿತ್ರ ಬಿಡುಗಡೆಗೆ ಸಿದ್ಧವಿದೆ. ಇದರಲ್ಲಿ ದುನಿಯಾ ವಿಜಯ್‌ ಜತೆ ನಟಿಸಿದ್ದೇನೆ. ‘ದಿಲ್‌ದಾರ್‌’ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಇದಾದ ಮೇಲೆ ನನ್ನ ಡ್ರೀಮ್ ಪ್ರಾಜೆಕ್ಟ್ ಪ್ರಾರಂಭಿಸಬೇಕಿದೆ’ ಎಂದರು ಶ್ರೇಯಸ್‌.

ಕಾಲೇಜಿನಲ್ಲಿ ನಡೆಯುವ ಪ್ರೀತಿ, ಪ್ರೇಮದ ಕಥೆ ಹೊಂದಿರುವ ಈ ಚಿತ್ರದಲ್ಲಿ ಸೌರವ್‌ ಲೋಕೇಶ್‌ ಖಳನಾಯಕನಾಗಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರ ಪಾತ್ರವನ್ನು ಪರಿಚಯಿಸುವ ಟೀಸರ್‌ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿತ್ತು. ಪ್ರಿಯಾಂಕ ಕುಮಾರ್‌ ಚಿತ್ರದ ನಾಯಕಿ. ಅರ್ಜುನ್ ಜನ್ಯ ಸಂಗೀತ, ಗಗನ್ ಗೌಡ ಛಾಯಾಚಿತ್ರಗ್ರಹಣವಿದೆ.

ADVERTISEMENT

‘ಈ ಚಿತ್ರ ಹಳೆಯ ಕಮಿಟ್‌ಮೆಂಟ್‌. ಚಿತ್ರ ತಡವಾಗಿದೆ. ಸದ್ಯ ನಾನು ಹಾಗೂ ನಮ್ಮ ತಂಡ ಮತ್ತೊಂದು ಆ್ಯಕ್ಷನ್‌, ಲವ್ ಸ್ಟೋರಿ ಮೇಲೆ ಕೆಲಸ ಮಾಡುತ್ತಿದ್ದೇವೆ. ಆ ಚಿತ್ರವನ್ನು ವಿದೇಶಗಳಲ್ಲಿ ಚಿತ್ರೀಕರಣ ನಡೆಸಲು ಆಲೋಚಿಸಿದ್ದೇವೆ. ಎರಡು ಭಾಷೆಗಳಲ್ಲಿ ನಿರ್ಮಾಣಗೊಳ್ಳಲಿದೆ’ ಎಂದು ಶ್ರೇಯಸ್‌ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.