ADVERTISEMENT

ಆಗಸ್ಟ್‌ 26ರಂದು ಬರ್ತಾನೆ ‘ಕೌಟಿಲ್ಯ’

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2022, 6:49 IST
Last Updated 24 ಆಗಸ್ಟ್ 2022, 6:49 IST
ಅರ್ಜುನ್‌ ರಮೇಶ್‌, ಪ್ರಿಯಾಂಕಾ ಚಿಂಚೋಳಿ
ಅರ್ಜುನ್‌ ರಮೇಶ್‌, ಪ್ರಿಯಾಂಕಾ ಚಿಂಚೋಳಿ   

ಅರ್ಜುನ್‌ ರಮೇಶ್‌ ನಟನೆಯ ‘ಕೌಟಿಲ್ಯ’ ಆಗಸ್ಟ್‌ 26ರಂದು ತೆರೆ ಕಾಣಲಿದೆ.

ಸದ್ಯ ವೂಟ್‌ ಸೆಲೆಕ್ಟ್‌ ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ‘ಬಿಗ್ ಬಾಸ್’ನಲ್ಲಿ ಪಾಲ್ಗೊಂಡಿದ್ದಾರೆ ಅರ್ಜುನ್ ರಮೇಶ್.

‘ನಮ್ಮ ಚಿತ್ರದ ಟ್ರೇಲರ್ ಪ್ರೇಕ್ಷಕರ ಮನ ತಲುಪಿದೆ. ರಕ್ಷಿತ್ ಶೆಟ್ಟಿ, ನಿರ್ದೇಶಕ ಸೂರಿ ಸೇರಿದಂತೆ ಸಾಕಷ್ಟು ಗಣ್ಯರು ಟ್ರೇಲರ್ ಬಗ್ಗೆ ಉತ್ತಮ ಮಾತುಗಳಾಡಿದ್ದಾರೆ. ಇದೇ ಶುಕ್ರವಾರ ಚಿತ್ರ ಬಿಡುಗಡೆಯಾಗುತ್ತಿದೆ’ ಎಂದರು ನಿರ್ದೇಶಕ ಪ್ರಭಾಕರ್ ಶೇರಖಾನೆ.

ADVERTISEMENT

‘ನಾನು ಈ ಹಿಂದೆ ‘ಶನಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸುತ್ತಿದ್ದೆ. ನನ್ನದು ಈ ಚಿತ್ರದಲ್ಲಿ ಆರ್ಕಿಟೆಕ್ಟ್ ಎಂಜಿನಿಯರ್‌ ಪಾತ್ರ. ಒಬ್ಬ ಎಂಜಿನಿಯರ್ ಚಾಣಕ್ಯನ ತಂತ್ರಗಳನ್ನು ಯಾವ ರೀತಿ ಬಳಸಿಕೊಳ್ಳುತ್ತಾನೆ ಎನ್ನುವುದನ್ನು ಈ ಚಿತ್ರದಲ್ಲಿ ನೋಡಬಹುದು’ ಎಂದು ನಾಯಕ ಅರ್ಜುನ್ ರಮೇಶ್‌ ಹೇಳಿದರು.

‘ನಾನು ಈ ಚಿತ್ರದಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ನನ್ನನ್ನು ಧಾರಾವಾಹಿಗಳಲ್ಲಿ ಮುಗ್ಧ ಹುಡುಗಿಯ ಪಾತ್ರದಲ್ಲಿ ನೋಡಿದ್ದೀರಿ. ಇದರಲ್ಲಿ ಒಬ್ಬರು ಬಯ್ದರೆ ವಾಪಸ್ ಬೈಯುವ ಹುಡುಗಿ ನಾನು’ ಎಂಬುದು ಚಿತ್ರದ ನಾಯಕಿ ಪ್ರಿಯಾಂಕ ಚಿಂಚೋಳಿ ಮಾತು.ವಿಜೇಂದ್ರ ಬಿ.ಎ. ಈ ಚಿತ್ರದ ನಿರ್ಮಾಪಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.