ADVERTISEMENT

ಬಾಕ್ಸ್‌ ಆಫೀಸಿನಲ್ಲಿ ಕೆಜಿಎಫ್‌ ಚಿನ್ನದ ಹೆಜ್ಜೆ!

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 11:33 IST
Last Updated 7 ಜನವರಿ 2019, 11:33 IST
ಕೆಜಿಎಫ್‌ ಸಿನಿಮಾದಲ್ಲಿ ಯಶ್‌, ತಮನ್ನಾ
ಕೆಜಿಎಫ್‌ ಸಿನಿಮಾದಲ್ಲಿ ಯಶ್‌, ತಮನ್ನಾ   

ಬೆಂಗಳೂರು:ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಪಂಚಭಾಷಾ ಚಿತ್ರ ಕೆಜಿಎಫ್‌ ಇದುವರೆಗೆ ಒಟ್ಟು ₹ 198.5 ಕೋಟಿ ಹಣ ಬಾಚಿಕೊಂಡಿದೆಯಂತೆ! ಹೀಗೆಂದು ಇಂಡಿಯಾ ಟುಡೆವರದಿ ಮಾಡಿದೆ.

ಕೆಜಿಎಫ್‌ ಚಿತ್ರ ಬಿಡುಗಡೆ ಆದ ನಂತರ ಯಶ್ ಹಾಗೂ ಈ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಅವರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೆಂಪು ಕಣ್ಣು ಬೀರಿದ್ದರೂ, ಸಿನಿಮಾ ಪ್ರೇಮಿಗಳು ಮಾತ್ರ ಕೆಜಿಎಫ್ ಪ್ರದರ್ಶನ ಕಾಣುತ್ತಿರುವ ತೆರೆಯ ಮೇಲೆ ಪ್ರೀತಿಯ ಮಳೆ ಸುರಿಸುತ್ತಿದ್ದಾರೆ. ಪರಿಣಾಮವಾಗಿ ಚಿತ್ರ ಇಷ್ಟು ದೊಡ್ಡ ಮೊತ್ತವನ್ನು ಬಾಕ್ಸ್‌ ಆಫೀಸ್‌ನಲ್ಲಿ ಕೊಳ್ಳೆ ಹೊಡೆದಿದೆ!‌

ಕೆಜಿಎಫ್ ಚಿತ್ರದ ಬಾಕ್ಸ್‌ ಆಫೀಸ್‌ ಸಾಧನೆ ಕುರಿತು ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ಯು ‘ಹೊಂಬಾಳೆ ಫಿಲಂಸ್’ ಸಂಸ್ಥೆಯನ್ನು ಸಂಪರ್ಕಿಸಲು ಪ್ರಯತ್ನಿಸಿತು. ಆದರೆ ಸಂಸ್ಥೆಯ ಪ್ರತಿನಿಧಿಗಳು ಸಂಪರ್ಕಕ್ಕೆ ಲಭ್ಯರಾಗಲಿಲ್ಲ.

ADVERTISEMENT

ಹಿಂದಿ ಮಾತನಾಡುವ ಪ್ರದೇಶಗಳಲ್ಲಿ ಉತ್ತಮ ಸಾಧನೆ ತೋರಿದ ‘ಚಂದನವನ’ದ ಮೊದಲ ಸಿನಿಮಾ ಎಂಬ ಖ್ಯಾತಿಗೂ ಕೆಜಿಎಫ್‌ ಪಾತ್ರವಾಗಿದೆ. ಚಿತ್ರದ ಹಿಂದಿ ಆವೃತ್ತಿಯು ₹ 32.95 ಕೋಟಿ ಸಂಗ್ರಹಿಸಿದೆ ಎಂದು ಬ್ಯುಸಿನೆಸ್ ಟುಡೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.