ADVERTISEMENT

ಕೃತಿ ಸನೆನ್‌ ವಿರುದ್ಧ ನೆಟ್ಟಿಗರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 11:30 IST
Last Updated 10 ಜುಲೈ 2019, 11:30 IST
kriti sanon
kriti sanon   

ಚೀತಾಗಳೊಂದಿಗೆ ತೆಗೆಸಿಕೊಂಡ ಚಿತ್ರಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದ ನಟಿ ಕೃತಿ ಸನೆನ್‌ ನೆಟ್ಟಿಗರ ಆಕ್ರೋಶ ಎದುರಿಸಿದ್ದಾರೆ.

ಇತ್ತೀಚೆಗೆ ಸಿನಿಮಾವೊಂದರ ಚಿತ್ರೀಕರಣಕ್ಕೆ ದಕ್ಷಿಣ ಆಫ್ರಿಕಾದ ಜಾಂಬಿಯಾಗೆ ತೆರಳಿದ್ದ ಕೃತಿ ಅಲ್ಲಿನ ರಾಷ್ಟ್ರೀಯ ಪಾರ್ಕ್‌ನಲ್ಲಿ ಚೀತಾಗಳೊಂದಿಗೆ ತೆಗೆಸಿಕೊಂಡ ಹತ್ತಾರು ಚಿತ್ರಗಳನ್ನು ಅಪ್‌ಲೋಡ್‌ ಮಾಡಿದ್ದರು. ಚೀತಾಗಳೊಂದಿಗೆ ವಾಕ್‌ ಮಾಡಿರುವ ಜೊತೆಗೆ ಅವುಗಳ ಹತ್ತಿರ ನಿಂತು ಪೋಸ್ ಕೂಡ ಕೊಟ್ಟಿದ್ದರು.

ಈ ಚಿತ್ರಗಳು ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಈ ರೀತಿಯ ಚಿತ್ರಗಳಿಗಾಗಿ ಚೀತಾಗಳಿಗೆ ಡ್ರಗ್ಸ್‌ ಕೊಡಲಾಗುತ್ತದೆ. ಅದ್ದರಿಂದಲೇ ಅವು ಮನುಷ್ಯರಿಗೆ ತೊಂದರೆ ಕೊಡದೇ ಸುಮ್ಮನೆ ಚಿತ್ರ ತೆಗೆಯಲು ಬಿಡುತ್ತವೆ. ಪ್ರಾಣಿಗಳಿಗೆ ಹಿಂಸೆ ಕೊಟ್ಟು ಫೋಟೊ ತೆಗೆಸಿಕೊಳ್ಳುವ ಟ್ರೆಂಡ್‌ ಈಗ ಶುರುವಾಗಿದೆ. ಇದನ್ನೆಲ್ಲಾ ಬಿಡಿ’ ಎಂದು ಹಲವರು ಟ್ವೀಟ್ ಮಾಡಿದ್ದಾರೆ.

ADVERTISEMENT

‘ಪ್ರಾಣಿ ಹಿಂಸೆಯಿಂದ ನಿಮಗೇನು ಖುಷಿ ಸಿಗುತ್ತದೆ. ಈ ರೀತಿಯ ಚಿತ್ರಗಳು ನಿಮಗೆ ಸಹಾಯ ಮಾಡುವುದಿಲ್ಲ’ ಎನ್ನುವ ಕಮೆಂಟ್ಸ್‌ಗಳು ಬರತೊಡಗಿದ ಬಳಿಕ ಅವರು ಕೆಲವು ಚಿತ್ರಗಳನ್ನು ಡಿಲೀಟ್ ಮಾಡಿದ್ದಾರೆ.

ಇದಕ್ಕೆ ಕ್ಷಮೆ ಕೂಡ ಕೇಳಿರುವ ಕೃತಿ, ಡ್ರಗ್ಸ್‌ ಕೊಟ್ಟಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ. ಹಾಗೆಯೇ ಅವುಗಳನ್ನು ನಿಯಂತ್ರಿಸುವುದಾಗಿ ಹೇಳಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.