ADVERTISEMENT

ಲಕ್ಷ್ಮಿ ರೈ ಈಗ ಬಿಕನಿ ಕ್ವೀನ್‌

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 19:31 IST
Last Updated 26 ಸೆಪ್ಟೆಂಬರ್ 2019, 19:31 IST
ಲಕ್ಷ್ಮಿ ರೈ
ಲಕ್ಷ್ಮಿ ರೈ   

ಬಹುಭಾಷೆಯ ತಾರೆ ಲಕ್ಷ್ಮಿ ರೈ ಅವರು ಬಿಕನಿ ಧರಿಸಿರುವ ಚಿತ್ರಗಳು ಇತ್ತೀಚೆಗೆ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗುತ್ತಿವೆ. ಈಜುಡಿಗೆ ಮತ್ತು ಬಿಕನಿಯಲ್ಲಿ ತೆಗೆಸಿಕೊಂಡಿದ್ದ ಅವರ ಬೋಲ್ಡ್‌ ಚಿತ್ರಗಳು ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದವು. ಈಗ ಮತ್ತದೇ ಮಾದರಿಯ ಬಿಕನಿ ಧರಿಸಿದ ಚಿತ್ರ ಫಿಟ್‌ನೆಸ್‌ ಪ್ರಿಯರು ಮತ್ತು ಸೌಂದರ್ಯ ಆರಾಧಕರ ಮೆಚ್ಚುಗೆ ಗಿಟ್ಟಿಸುತ್ತಿದೆ.

ದೇಹದ ತೂಕ ಇಳಿಸಿಕೊಂಡು ಸಪೂರ ದೇಹಸಿರಿ ಸಂಪಾದಿಸಿದ ಖುಷಿಯನ್ನು ಲಕ್ಷ್ಮಿ ರೈ ಅವರು ಸಾಮಾಜಿಕ ಜಾಲತಾಣಗಳಲ್ಲಿಸುಂದರ ಚಿತ್ರಗಳ ಸಮೇತ ಹಂಚಿಕೊಂಡು, ಅಭಿಮಾನಿಗಳನ್ನೂ ಖುಷಿಪಡಿಸಿದ್ದರು.

‘ಇದನ್ನು ನೀವು ಹೇಗೆ ಮಾಡ್ತೀರಿ ಎನ್ನುವುದು ನನಗೆ ಗೊತ್ತಾಗುತ್ತಿಲ್ಲ’ ಎಂದು ಕೆಲವೊಬ್ಬರು ನನ್ನನ್ನು ಕೇಳಿದ್ದಾರೆ. ‘ನನಗೆ ಬೇರೆ ಆಯ್ಕೆ ಇಲ್ಲ’ವೆಂದು ನಾನು ಅವರಿಗೆ ಹೇಳಿದ್ದೇನೆ ಎಂದು ಲಕ್ಷ್ಮಿ ರೈ ಬಿಕನಿ ಬಾಡಿ ಚಿತ್ರದ ಜತೆಗೆ ಬರೆದುಕೊಂಡಿದ್ದಾರೆ.

ಬಿಕನಿ ಧರಿಸಿದ ಚಿತ್ರವನ್ನು ಅವರುಟ್ವಿಟರ್‌ನಲ್ಲಿ ಶೇರ್‌ ಮಾಡಿದ ಒಂದೇ ದಿನದಲ್ಲಿ ಸುಮಾರು 10 ಸಾವಿರ ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಸುಮಾರು 350ಕ್ಕೂ ಹೆಚ್ಚು ಮಂದಿ ಈ ಚಿತ್ರವನ್ನು ಮರು ಟ್ವೀಟ್‌ ಮಾಡಿದ್ದಾರೆ. ಕೆಲವರಂತೂ ‘ಲಕ್ಷ್ಮಿರೈ ನಿಜವಾದ ಬಿಕನಿ ಕ್ವೀನ್‌’ ಎನ್ನುವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವು ಪಡ್ಡೆಗಳು ‘ನೀವೇಕೆ ನಮ್ಮ ಹೃದಯ ಬಡಿತವನ್ನು ಹೆಚ್ಚು ಮಾಡುತ್ತಿದ್ದೀರಿ’ ಎಂದು ರೈ ಅವರ ಕಾಲೆಳೆಯುವಯತ್ನವನ್ನೂ ಮಾಡಿದ್ದಾರೆ.

ಕನ್ನಡ,ಹಿಂದಿ, ತಮಿಳು, ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಲಕ್ಷ್ಮಿರೈ ಕನ್ನಡದಲ್ಲಿ ನಟಿಸಿರುವ ‘ಝಾನ್ಸಿ’ ಚಿತ್ರ ಸದ್ಯದಲ್ಲೇ ತೆರೆ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.