ADVERTISEMENT

ಲವ್‌ ಮಾಕ್ಟೇಲ್‌–2 ಸಿನಿಮಾ ಅಮೆಜಾನ್‌ ಫ್ರೈಮ್‌ನಲ್ಲಿ ಲಭ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಮಾರ್ಚ್ 2022, 10:49 IST
Last Updated 15 ಮಾರ್ಚ್ 2022, 10:49 IST
ಲವ್‌ ಮಾಕ್ಟೇಲ್‌–2
ಲವ್‌ ಮಾಕ್ಟೇಲ್‌–2   

ಬೆಂಗಳೂರು: ‘ಲವ್‌ ಮಾಕ್ಟೇಲ್‌–2’ ಸಿನಿಮಾ ಪ್ರಮುಖ ಓಟಿಟಿ ವೇದಿಕೆಯಾದ ಅಮೆಜಾನ್ ಫ್ರೈಮ್‌ನಲ್ಲಿ ಇಂದು ಬಿಡುಗಡೆಯಾಗಿದೆ. ಈಗಾಗಲೇ ಈ ಚಿತ್ರ ಫೆ.11ಕ್ಕೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ಈ ಮೊದಲುಲವ್‌ ಮಾಕ್ಟೇಲ್‌ ಸಿನಿಮಾ ಕೂಡ ಅಮೆಜಾನ್ ಫ್ರೈಮ್‌ನಲ್ಲಿ ಬಿಡುಗಡೆಯಾಗಿತ್ತು.

ಡಾರ್ಲಿಂಗ್‌ ಕೃಷ್ಣ, ರಾಚೆಲ್‌ ಡೇವಿಡ್‌, ಮಿಲನ ನಾಗರಾಜ್‌ ಅಭಿನಯದ ಸಿನಿಮಾ ಇದಾಗಿದ್ದು, ಡಾರ್ಲಿಂಗ್‌ ಕೃಷ್ಣ ಹಾಗೂ ಅವರ ಪತ್ನಿ, ನಟಿ ಮಿಲನಾ ನಾಗರಾಜ್‌ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ‘ನಿಧಿ’ಯನ್ನು ಕಳೆದುಕೊಂಡ ‘ಆದಿ’ಯ ಕಥೆ ಎರಡನೇ ಭಾಗದಲ್ಲಿ ಸಾಗುತ್ತದೆ.

ADVERTISEMENT

ಡಾರ್ಲಿಂಗ್‌ ಕೃಷ್ಣ ನಿರ್ದೇಶನದ ಚೊಚ್ಚಲ ಚಿತ್ರವಾಗಿದ್ದ ‘ಲವ್‌ ಮಾಕ್ಟೇಲ್‌’ 2020ರ ಜ.31ರಂದು ತೆರೆಕಂಡಿತ್ತು. ಪ್ರೇಮಕಥೆಯಾದರೂ ಚಿತ್ರವು ಭಿನ್ನವಾಗಿದ್ದ ಕಾರಣ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಕೋವಿಡ್‌ ಲಾಕ್‌ಡೌನ್‌ ಕಾರಣದಿಂದಾಗಿ ಚಿತ್ರಮಂದಿರಗಳಿಗೆ ಬೀಗಬಿದ್ದ ಕಾರಣ, ಕೇವಲ 43 ದಿನ ಚಿತ್ರವು ತೆರೆಮೇಲೆ ಪ್ರದರ್ಶನ ಕಂಡಿತ್ತು. ನಂತರದಲ್ಲಿ ಚಿತ್ರವು ಒಟಿಟಿಯಲ್ಲಿ ತೆರೆಕಂಡು, ಮತ್ತಷ್ಟು ಪ್ರೇಕ್ಷಕರನ್ನು ತಲುಪಿತ್ತು. ತೆಲುಗಿಗೂ ಈ ಸಿನಿಮಾ ರಿಮೇಕ್‌ ಆಗಿತ್ತು.

ಮೊದಲನೇ ಭಾಗಕ್ಕೆ ರಘು ದೀಕ್ಷಿತ್‌ ಸಂಗೀತ ನೀಡಿದ್ದರು. ಎರಡನೇ ಭಾಗಕ್ಕೆ ನಕುಲ್‌ ಅಭ್ಯಂಕರ್‌ ಸಂಗೀತ ನಿರ್ದೇಶನವಿದೆ. ರಾಘವೇಂದ್ರ ಕಾಮತ್‌ ಸಾಹಿತ್ಯವಿರುವ ಎರಡನೇ ಭಾಗದ ಚಿತ್ರದ ಹಾಡುಗಳು ಈಗಾಗಲೇ ಹಿಟ್‌ ಆಗಿವೆ. ಸಕಲೇಶಪುರ, ಮಡಿಕೇರಿ, ಲಡಾಖ್‌, ಚಿಕ್ಕಮಗಳೂರು ಭಾಗದಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.