‘ಮಹರ್ಷಿ’ ಸಿನಿಮಾದ ಬಿಡುಗಡೆಯ ಖುಷಿಯಲ್ಲಿರುವ ತೆಲುಗು ನಟ ‘ಪ್ರಿನ್ಸ್’ ಮಹೇಶ್ ಬಾಬು, ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.
ಈ ಹಿಂದೆ ಮಾಡಿಕೊಂಡ ಒಪ್ಪಂದದಂತೆ ಎಸ್.ಎಸ್. ರಾಜಮೌಳಿ ಜತೆಗೆ ಮುಂಬರುವ ವರ್ಷದಲ್ಲಿ ಹೊಸ ಚಿತ್ರದಲ್ಲಿ ನಟಿಸುವುದಾಗಿ ಮಹೇಶ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
‘ಇಬ್ಬರೂ ಜತೆಯಾಗಿ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿದ್ದೇವೆ. ಈಗಾಗಲೇ ಸಿನಿಮಾದ ಸ್ಕ್ರಿಪ್ಟ್ ಕೂಡಾ ಅಂತಿಮವಾಗಿದೆ. ಹಿರಿಯ ನಿರ್ಮಾಪಕ ಕೆ.ಎಲ್. ನಾರಾಯಣ ಸಿನಿಮಾ ನಿರ್ಮಿಸುತ್ತಿದ್ದಾರೆ. ರಾಜಮೌಳಿ ಮತ್ತು ನಾನು ಸದ್ಯಕ್ಕೆ ಒಪ್ಪಿಕೊಂಡಿರುವ ಪ್ರಾಜೆಕ್ಟ್‌ಗಳನ್ನು ಮುಗಿಸಿದ ನಂತರವೇ ಮುಂದಿನ ವರ್ಷ ಜತೆಯಾಗಿ ಕೆಲಸ ಮಾಡಲಿದ್ದೇವೆ’ ಎಂದು ಪ್ರಿನ್ಸ್ ವಿವರಿಸಿದ್ದಾರೆ.
‘ಮಹರ್ಷಿ’ ಮೇ 9ರಂದು ತೆರೆಕಾಣಲಿದೆ. ನಿರ್ದೇಶಕರಾದ ತ್ರಿವಿಕ್ರಮ್ ಶ್ರೀನಿವಾಸ್, ಸುಕುಮಾರ್ ಜೊತೆ ಸಿನಿಮಾಕ್ಕೆ ಒಪ್ಪಿಗೆ ನೀಡಿರುವ ಮಹೇಶ್, ನಂತರ ಅನಿಲ್ ರವಿಪುಡಿ ಅವರ ಸಿನಿಮಾದಲ್ಲೂ ನಟಿಸಲಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಜುಲೈನಲ್ಲಿ ಆರಂಭವಾಗಲಿದೆ.
ವಂಶಿ ಪೈಡಿಪಲ್ಲೇ ನಿರ್ದೇಶನದ ‘ಮಹರ್ಷಿ’ ಮೇ 9ರಂದು ತೆರೆಕಾಣಲಿದ್ದು, ಮಹೇಶ್‌ಗೆ ಕನ್ನಡತಿ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಸಿನಿಮಾದಲ್ಲಿ ಜಗಪತಿ ಬಾಬು, ಅಲ್ಲರಿ ನರೇಶ್ ಕೂಡಾ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.