ADVERTISEMENT

‘ಮಾಯಾ ಕನ್ನಡಿ’ಯಲ್ಲಿ ಬ್ಲೂವೇಲ್‌ ನೋಟ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 19:33 IST
Last Updated 24 ಏಪ್ರಿಲ್ 2019, 19:33 IST
ಅನ್ವಿತಾ ಸಾಗರ್‌
ಅನ್ವಿತಾ ಸಾಗರ್‌   

ದುಬೈನ ವಾಯುಯಾನ ಸಂಸ್ಥೆಯಲ್ಲಿ ಫ್ಲೈಟ್‌ ಆಪರೆಟಿಂಗ್‌ ಕೆಲಸ ಮಾಡಿಕೊಂಡಿರುವ ಮಂಗಳೂರು ಮೂಲದ ವಿನೋದ್‌ ಪೂಜಾರಿಸಿನಿಮಾ ಕ್ಷೇತ್ರದಲ್ಲಿನ ಆಸಕ್ತಿಯಿಂದಾಗಿ ಇದೇ ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕೂ ಕೈಹಚ್ಚಿದ್ದಾರೆ.‘ಮಾಯಾ ಕನ್ನಡಿ’ಗೆ ಆ್ಯಕ್ಷನ್‌ಕಟ್‌ ಹೇಳಿದ್ದಾರೆ. ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು,ಸೆನ್ಸಾರ್‌ ಮಂಡಳಿಯ ಒಪ್ಪಿಗೆಗೆ ಕಾಯುತ್ತಿದ್ದಾರೆ.

ಚಿತ್ರತಂಡದೊಂದಿಗೆ ಸುದ್ದಿಗೋಷ್ಠಿಗೆ ಹಾಜರಾಗಿದ್ದ ನಿರ್ದೇಶಕ ವಿನೋದ್‌ ಪೂಜಾರಿ,ಜಗತ್ತಿನೆಲ್ಲಡೆ ಸದ್ದು ಮಾಡಿದ್ದ ಬ್ಲೂವೇಲ್‌ ಗೇಮ್‌ನಿಂದಾಗಿ ನೂರಾರು ಯುವಜನರು ಆತ್ಮಹತ್ಯ ಮಾಡಿಕೊಂಡಿದ್ದರು. ವಿದ್ಯಾರ್ಥಿಗಳ ಮೇಲೆ ಇದು ಬೀರಿದ ಪರಿಣಾಮ ಮತ್ತು ಈ ಆಟ ತಂದೊಡ್ಡಿದ ಅನಾಹುತದ ಬಗ್ಗೆ ಅಧ್ಯಯನ ನಡೆಸಿ, ನೈಜ ಘಟನೆ ಆಧರಿಸಿ ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಆಗಿರುವ ಕಥೆ ಹೆಣೆದು ಸಿನಿಮಾ ಮಾಡಿದ್ದೇವೆ.ಕಾಲೇಜು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಸರಣಿ ಆತ್ಮಹತ್ಯೆಯ ಸುತ್ತಲಿನ ಕಥೆ ಇದು ಎಂದು ಮಾತು ಆರಂಭಿಸಿದರು.ಮುಂಬೈನಲ್ಲಿ ಕಿರುಚಿತ್ರ ಮಾಡಿದ ಅನುಭವ ಮತ್ತು ಅಮೆರಿಕದಲ್ಲಿ ಚಿತ್ರ ನಿರ್ಮಾಣದ ಕೋರ್ಸ್‌ ಕಲಿತುಸಿನಿಮಾ ನಿರ್ಮಾಣಕ್ಕೆ ಇಳಿದಿದ್ದೇನೆ. 35 ದಿನಗಳಲ್ಲಿ ಚಿತ್ರೀಕರಣ ಮುಗಿಸಿದ್ದೇನೆಎನ್ನುವ ಮಾತು ಸೇರಿಸಿದರು ಪೂಜಾರಿ.

ಊರ್ವಿ, ರಿಲ್ಯಾಕ್ಸ್‌ ಸತ್ಯ, ಡಬಲ್‌ ಎಂಜಿನ್‌, ತೆರೆ ಕಾಣಬೇಕಿರುವ ಮಂಜರಿ, ಮೈಸೂರು ಡೈರಿ, ಡಾಟರ್‌ ಆಫ್‌ ಪಾರ್ವತಮ್ಮ, ಅಂಜಲಿ ಪಾಪ, ರಾಂಚಿ ಸಿನಿಮಾಗಳಲ್ಲಿ ನಟಿಸಿರುವ ಪ್ರಭು ಮುಂಡ್ಕೂರು ‘ಮಾಯಾ ಕನ್ನಡಿ’ಯಲ್ಲಿ ಕಾಲೇಜು ಸ್ಟೂಟೆಂಡ್‌ ಪಾತ್ರ ಮಾಡಿರುವುದಾಗಿ ಹೇಳಿದರು. ತುಳು ಚಿತ್ರದ ನಟಿ ಅನ್ವಿತಾ ಸಾಗರ್‌, ಕಾಲೇಜು ಕೌನ್ಸಿಲರ್‌ ಪಾತ್ರದಲ್ಲಿ, ‘ಕಿರಿಕ್’ ಸಿನಿಮಾ ಖ್ಯಾತಿಯ ಅಶ್ವಿನ್‍ ರಾವ್‌ ಪಲ್ಲಕ್ಕಿ ವಿಲನ್‌ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಮತ್ತು ನಟ ಕೆ.ಎಸ್‌.ಶ್ರೀಧರ್‌ ಅವರು ಕಾಲೇಜಿನ ಟ್ರಸ್ಟಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ADVERTISEMENT

ಈ ಚಿತ್ರಕ್ಕೆ ಸಪ್ನಾಪಾಟೀಲ್‌,ರಂಜಿತ್‌ ಬಜ್ಪೆ ಆರ್ಥಿಕ ಇಂಧನ ಒದಗಿಸಿದ್ದಾರೆ. ತಾರಾಗಣದಲ್ಲಿ ಅನೂಪ್‍ಸಾಗರ್, ಕಾರ್ತಿಕ್‍ರಾವ್, ಶ್ರೀಶ್ರೇಯಾ ಇದ್ದಾರೆ.

ಅಭಿಷೇಕ್, ರಜನೀಶ್‍ ಅಮಿನ್,ಕೀರ್ತನ್‍ ಭಂಡಾರಿ ಸಾಹಿತ್ಯದ ಐದು ಗೀತೆಗಳಿಗೆ ಅಭಿಷೇಕ್.ಎಸ್.ಎನ್ ಸಂಗೀತ ಸಂಯೋಜಿಸಿ, ಹೊಸಬರಿಂದ ಹಾಡಿಸಿದ್ದಾರೆ. ಸಂಭಾಷಣೆ ಮಂಡ್ಯ ಮಂಜು,ಸಂಕಲನ ಸುಜಿತ್‍ನಾಯಕ್,ಛಾಯಾಗ್ರಹಣ ಮನಿಕೂಕಲ್‍ನಾಯರ್,ಹಿನ್ನಲೆ ಸಂಗೀತ ಆನಂದ್‍ರಾಜ್ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.