ಶ್ರೀಮಂತ ಮನೆತನದ ಹುಡುಗ ಪ್ರೀತಿಗಾಗಿ ಏನೆಲ್ಲಾ ಮಾಡುತ್ತಾನೆ ಎಂದು ಹೇಳುತ್ತಿದೆ ‘ಮೊದಲ ಮಿಡಿತ’. ಚಿತ್ರದ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆಯಾಗಿದೆ. ಡಿಸೆಂಬರ್ನಲ್ಲಿ ಚಿತ್ರ ತೆರೆಗೆ ಬರಲಿದೆಯಂತೆ.
ಹರಿಚೇತ್ ಈ ಚಿತ್ರದ ನಿರ್ದೇಶಕ. ಕಥೆ, ಚಿತ್ರಕಥೆಯೂ ಅವರದ್ದೇ. ‘ಈ ಚಿತ್ರವನ್ನು ಕುಟುಂಬ ಸಮೇತ ನೋಡಬಹುದು. ಭಾವನಾತ್ಮಕತೆ, ಸಾಹಸ ದೃಶ್ಯಗಳು, ಪ್ರೇಮ, ತಂದೆ ಮಕ್ಕಳ ಬಾಂಧವ್ಯ ಎಲ್ಲವೂ ಇದೆ. ಸೆನ್ಸಾರ್ನಿಂದ ಯು/ಎ ಪ್ರಮಾಣಪತ್ರ ಸಿಕ್ಕಿದೆ ಎಂದರು ಅವರು.ಕೃಷ್ಣಪ್ಪ ಗುಂಡಸಂದ್ರ, ಗಟ್ಟಹಳ್ಳಿ ವಿಶ್ವನಾಥ್ ಈ ಚಿತ್ರದ ನಿರ್ಮಾಪಕರು.
ನಿಮೀಶ್ ಸಾಗರ್ ನಾಯಕ.ರಶ್ಮಿತಾ ರೋಜಾ ನಾಯಕಿ.ಹಾಸ್ಯ ಕಲಾವಿದ ಕೆಂಪೇಗೌಡ ಅವರೂ ತಾರಾಗಣದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.