ADVERTISEMENT

‘ಶುಗರ್‌ಲೆಸ್’: ಸುಧಾಕರ್‌ ಜಾಗಕ್ಕೆ ನವೀನ್‌ ಡಿ ಪಡೀಲ್‌

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 9:20 IST
Last Updated 30 ಅಕ್ಟೋಬರ್ 2020, 9:20 IST
ನವೀನ್‌ ಡಿ. ಪಡೀಲ್‌
ನವೀನ್‌ ಡಿ. ಪಡೀಲ್‌   

‘ಶುಗರ್‌ಲೆಸ್’‌ ಚಿತ್ರದಲ್ಲಿ ಪಾತ್ರ ನಿರ್ವಹಿಸುತ್ತಿದ್ದ ನಟ ರಾಕ್‌ಲೈನ್‌ ಸುಧಾಕರ್‌ ಅವರ ನಿಧನದಿಂದ ಖಾಲಿಯಾದ ಜಾಗವನ್ನು ತುಂಬುತ್ತಿದ್ದಾರೆ ತುಳು ಚಿತ್ರ ನಟ ‘ಕುಸೆಲ್ದರಸೆ’ ನವೀನ್‌ ಡಿ. ಪಡೀಲ್‌.

ಸುಧಾಕರ್‌ ಅವರ ಪಾತ್ರದ ಹಲವಾರು ಸನ್ನಿವೇಶಗಳನ್ನು ಈಗಾಗಲೇ ಚಿತ್ರೀಕರಿಸಲಾಗಿತ್ತು. ಈಗ ಅದೇ ದೃಶ್ಯಗಳನ್ನು ನವೀನ್‌ ಅವರೊಂದಿಗೆ ಚಿತ್ರಿಸಲಾಗಿದೆ.

‘ಸುಧಾಕರ್‌ ನಿಧನರಾದ ಕೆಲವು ದಿನಗಳ ನಂತರ ನಿರ್ದೇಶಕ ಶಶಿಕಾಂತ್ ಸೇರಿದಂತೆ ಚಿತ್ರದ ತಂಡದ ಹಲವರು ನನನ್ನು ಸಂಪರ್ಕಿಸಿದರು. ತಕ್ಷಣವೇ ಚಿತ್ರೀಕರಣಕ್ಕೆ ಒಪ್ಪಿದೆ. ಈ ಕೆಲಸವನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಂಡೆ.ಈ ಪಾತ್ರ ನನಗೆ ಉತ್ಸಾಹ ತುಂಬಿದೆ’ ಎಂದು ನವೀನ್‌ ಹೇಳಿದ್ದಾರೆ.

ADVERTISEMENT

‘ಇದರಲ್ಲಿ ಸುಧಾಕರ್‌ ಅವರದ್ದು ಮಂಗಳೂರಿನವರ ಪಾತ್ರ. ಆ ಪಾತ್ರ ನನಗೆ ಸಿಕ್ಕಿದೆ. ದತ್ತಣ್ಣನಂಥ ಹಿರಿಯ, ಅನುಭವಿ ಕಲಾವಿದರೊಂದಿಗೆ ನಟಿಸುವುದು ಒಂದು ಖುಷಿಯ ವಿಚಾರ’ ಎಂದು ನವೀನ್‌ ಹೇಳಿದ್ದಾರೆ.

ನವೀನ್‌ ತುಳು ರಂಗಭೂಮಿಯ ಖ್ಯಾತ ಹಾಸ್ಯ ಕಲಾವಿದ. ಈ ಹಾಸ್ಯ ಪಾತ್ರಗಳಿಂದಾಗಿಯೇ ಅವರನ್ನು ಕರಾವಳಿ ಭಾಗದಲ್ಲಿ ‘ಕುಸೆಲ್ದರಸೆ’ (ತಮಾಷೆಯ ಅರಸ) ಎಂದುಅಭಿಮಾನಿಗಳುಕರೆಯುತ್ತಾರೆ. ಹತ್ತಾರು ತುಳು ಚಿತ್ರಗಳಲ್ಲಿ ನಟಿಸಿದ, ಬಿರ್ಸೆ ಚಿತ್ರದಲ್ಲಿ ನಾಯಕನಾಗಿ ನಟಿಸಿದ ಅನುಭವಿ ಅವರು.

ಮಧುಮೇಹ ನಿಭಾಯಿಸುವ ಯುವಕನಾಗಿ ಚಿತ್ರದಲ್ಲಿ ಪ್ರಥ್ವಿ ಇದ್ದಾರೆ. ಪ್ರಿಯಾಂಕಾ ತಿಮ್ಮೇಶ್‌ ಅವರಿಗೆ ಜೋಡಿಯಾಗಲಿದ್ದಾರೆ. ಪ್ರಿಯಾಂಕಾ ಇತ್ತೀಚೆಗೆ ಭೀಮಸೇನ ನಳಮಹಾರಾಜ ಚಿತ್ರದ ಮೂಲಕ ಹಿರಿತೆರೆ ಪ್ರವೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.