ADVERTISEMENT

ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ OG ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

​ಪ್ರಜಾವಾಣಿ ವಾರ್ತೆ
Published 26 ಮೇ 2025, 9:58 IST
Last Updated 26 ಮೇ 2025, 9:58 IST
<div class="paragraphs"><p>OG </p></div>

OG

   

ಬೆಂಗಳೂರು: ಆಂಧ್ರಪ್ರದೇಶದ ಡಿ.ಸಿ.ಎಂ ಸಹ ಆಗಿರುವ ತೆಲುಗು ನಟ ಪವನ್ ಕಲ್ಯಾಣ್ ಅವರ ಬಹುನಿರೀಕ್ಷಿತ ಚಿತ್ರ ಒ.ಜಿ (They Call Him OG) ಸಿನಿಮಾ ಈ ವರ್ಷದ ಸೆಪ್ಟೆಂಬರ್ 25 ರಂದು ಬಿಡುಗಡೆಯಾಗಲಿದೆ.

ಸಾಹೋ ಸಿನಿಮಾ ಖ್ಯಾತಿಯ ಸುಜೀತ್ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಬಾಹುಬಲಿ ಖ್ಯಾತಿಯ ಡಿ.ವಿ.ವಿ ಎಂಟರ್‌ಟೈನ್‌ಮೆಂಟ್‌ನ ಡಿವಿವಿ ದಾನಯ್ಯ ಮತ್ತು ಕಲ್ಯಾಣ್ ದಾಸರಿ ಅವರು ನಿರ್ಮಾಣ ಮಾಡುತ್ತಿದ್ದಾರೆ.

ADVERTISEMENT

ಈ ಕುರಿತು ಡಿವಿವಿ ಎಂಟರ್‌ಟೈನ್‌ಮೆಂಟ್ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದೆ. ಈ ಹಿಂದೆ ಸಿನಿಮಾವನ್ನು ಸೆಪ್ಟೆಂಬರ್ 27ಕ್ಕೆ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಈಗ ದಿನಾಂಕ ಬದಲಾಗಿದೆ.

ತಮನ್. ಎಸ್ ಮ್ಯೂಸಿಕ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಖಳನಟನಾಗಿ ಬಾಲಿವುಡ್‌ನ ಇಮ್ರಾನ್ ಹಶ್ಮಿ ಅವರು ಕಾಣಿಸಿಕೊಂಡಿದ್ದಾರೆ. ನಾಯಕಿ ಪಾತ್ರದಲ್ಲಿ ಪ್ರಿಯಾಂಕಾ ಮೋಹನ್ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.