ADVERTISEMENT

ಒಟಿಟಿಯಲ್ಲಿ ‘ಒರು ಪಕ್ಕಾ ಕಥೈ’, ‘ಕೂಲಿ ನಂಬರ್ 1’

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 19:30 IST
Last Updated 17 ಡಿಸೆಂಬರ್ 2020, 19:30 IST
ಕೂಲಿ ನಂಬರ್ 1 ಚಿತ್ರದ ಪೋಸ್ಟರ್‌
ಕೂಲಿ ನಂಬರ್ 1 ಚಿತ್ರದ ಪೋಸ್ಟರ್‌   

ಒರು ಪಕ್ಕಾ ಕಥೈ

ಬಾಲಾಜಿ ತರಣೀಧರನ್‌ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ‘ಒರು ಪಕ್ಕಾ ಕಥೈ’ ತಮಿಳು ಸಿನಿಮಾ ಡಿಸೆಂಬರ್ 25ರಂದು
ಜೀ 5ನಲ್ಲಿ ಬಿಡುಗಡೆಯಾಗುತ್ತಿದೆ. ಕಾಳಿದಾಸ್ ಜಯರಾಂ ಹಾಗೂ ಮೇಘ ಆಕಾಶ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವಾಸನ್ ವಿಶ್ಯುವಲ್‌ ವೆಂಚರ್ಸ್‌ ಬ್ಯಾನರ್‌ ಅಡಿಯಲ್ಲಿ ಕೆ.ಎಸ್‌. ಶ್ರೀನಿವಾಸನ್‌ ಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದಾರೆ. ಗೋವಿಂದ್ ವಸಂತ್ ಸಂಗೀತ ನಿರ್ದೇಶನವಿದೆ.

ಸಿ. ಪ್ರೇಮಕುಮಾರ್ ಸಿನಿಮಾಟೊಗ್ರಫಿ ಚಿತ್ರಕ್ಕಿದೆ. ಪಿ.ವಿ. ಚಂದ್ರಮೌಳಿ, ಜೀವಾರವಿ, ಲಕ್ಷ್ಮಿ ಪ್ರಿಯಾ ಮೆನನ್‌, ಮೀನಾ ವೇಮುರಿ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ADVERTISEMENT

ಕೂಲಿ ನಂಬರ್ 1

ಬಾಲಿವುಡ್‌ನ ಬಹುನಿರೀಕ್ಷಿತ ‘ಕೂಲಿ ನಂಬರ್ 1’ ಚಿತ್ರ ಡಿಸೆಂಬರ್ 25ಕ್ಕೆ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ.

ವರುಣ್‌ ಧವನ್‌ ಹಾಗೂ ಸಾರಾ ಅಲಿ ಖಾನ್ ಮುಖ್ಯಪಾತ್ರದಲ್ಲಿ ನಟಿಸಿರುವ ಈ ಚಿತ್ರವು 1995ರಲ್ಲಿ ಬಿಡುಗಡೆಯಾದ ‘ಕೂಲಿ ನಂಬರ್ 1’ ಚಿತ್ರದ ರಿಮೇಕ್‌ ಆಗಿದೆ. ಆಗಿನ ‘ಕೂಲಿ ನಂಬರ್ 1’ ಚಿತ್ರದಲ್ಲಿ ಗೋವಿಂದ್ ಅಹುಜಾ, ಕರೀಶ್ಮಾ ಕಪೂರ್‌ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರವು 1993ರಲ್ಲಿ ತಮಿಳಿನಲ್ಲಿ ಬಿಡುಗಡೆಯಾದ ‘ಚಿನ್ನ ಮಾಪಿಳೈ’ ಸಿನಿಮಾದ ರಿಮೇಕ್ ಆಗಿದೆ.

ವರುಣ್ ನಾಯಕನಾಗಿರುವ ಈ ಚಿತ್ರಕ್ಕೆ ಡೇವಿಡ್‌ ಧವನ್ ನಿರ್ದೇಶನವಿದ್ದು, ವಾಸು ಭಗ್‌ನಾನಿ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಈ ಚಿತ್ರವನ್ನು 2020ರ ಮೇ 1ಕ್ಕೆ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿತ್ತು ಚಿತ್ರತಂಡ. ಆದರೆ ಕೋವಿಡ್‌–19 ಕಾರಣದಿಂದ ಬಿಡುಗಡೆ ಸಾಧ್ಯವಾಗಿರಲಿಲ್ಲ.

ಕೌಟುಂಬಿಕ ಹಾಸ್ಯಪ್ರಧಾನ ಚಿತ್ರವಾಗಿರುವ ‘ಕೂಲಿ ನಂಬರ್ 1’ ನಲ್ಲಿ ಪರೇಶ್ ರಾವಲ್‌, ಜಾವೇದ್ ಜಾಫ್ರಿ, ಜಾನಿ ಲಿವರ್‌, ರಾಜ್‌ಪಾಲ್‌ ಯಾದವ್‌, ಸಾಹಿಲ್ ವೈದ್‌, ಶಿಕಾ ತಲ್ಸಾನಿಯಾ, ವಿಕಾಸ್ ವರ್ಮಾ, ಮನೋಜ್ ಜೋಷಿ ಮೊದಲಾದವರು ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.