ADVERTISEMENT

ತೆಲುಗಿಗೂ ‘ಪಿಂಕ್‌’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 19:30 IST
Last Updated 24 ಸೆಪ್ಟೆಂಬರ್ 2019, 19:30 IST
ಬಾಲಕೃಷ್ಣ
ಬಾಲಕೃಷ್ಣ   

‘ಪಿಂಕ್‌’ ಚಿತ್ರದ ತಮಿಳು ರಿಮೇಕ್‌ ‘ನೇರ್ಕೊಂಡ ಪಾರ್ವೈ’ ಸಿನಿಮಾವು ಕಾಲಿವುಡ್‌ನಲ್ಲಿ ಭಾರಿ ಹಿಟ್‌ ಆಗಿತ್ತು. ಈ ಚಿತ್ರವನ್ನು ಬೋನಿ ಕಪೂರ್‌ ನಿರ್ಮಾಣ ಮಾಡಿದ್ದರು. ಈಗ ಪಿಂಕ್‌ ಚಿತ್ರ ತೆಲುಗಿಗೆ ರಿಮೇಕ್‌ ಆಗುತ್ತಿದ್ದು, ಆ ಚಿತ್ರವನ್ನೂ ಬೋನಿ ಕಪೂರ್‌ ಅವರೇ ನಿರ್ಮಾಣ ಮಾಡಲಿದ್ದಾರೆ.

ತೆಲುಗು ರಿಮೇಕ್‌ನಲ್ಲಿ ನಟ ಪವನ್‌ ಕಲ್ಯಾಣ್‌ ಹಾಗೂ ಬಾಲಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ಮೂಲ ಚಿತ್ರದಲ್ಲಿ ಅಮಿತಾಭ್‌ ಬಚ್ಚನ್‌ ಅವರು ನಟಿಸಿದ ಪಾತ್ರಕ್ಕೆ ಟಾಲಿವುಡ್‌ನ ಪ್ರಮುಖ ನಟರ ಹೆಸರುಗಳು ಕೇಳಿಬರುತ್ತಿದ್ದು, ಬೋನಿ ಕಪೂರ್‌ ಅವರು ಪವನ್‌ ಕಲ್ಯಾಣ್‌ ಅಥವಾ ಬಾಲಕೃಷ್ಣ ಅವರನ್ನು ನಟಿಸುವಂತೆ ಕೇಳಿಕೊಳ್ಳಲಿದ್ದಾರೆ.

ADVERTISEMENT

ರಾಜಕೀಯ ಪ್ರವೇಶ ಮಾಡಿದ್ದರಿಂದ ಪವನ್‌ ಕಲ್ಯಾಣ್‌ ಸಿನಿಕ್ಷೇತ್ರದಿಂದ ಈಗ ಸ್ವಲ್ಪ ದೂರ ಇದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸಿನಿಮಾವಾಗಿದ್ದರಿಂದ ಈ ಸಿನಿಮಾದಲ್ಲಿ ಅವರು ನಟಿಸಬಹುದು. ಇಲ್ಲದಿದ್ದರೆ ಆ ಪಾತ್ರಕ್ಕೆ ಬಾಲಕೃಷ್ಣ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ಸಿನಿಮಾದ ಮೂಲಗಳು ತಿಳಿಸಿವೆ.

ತಮಿಳು ರಿಮೇಕ್‌ ‘ನೇರ್ಕೊಂಡ ಪಾರ್ವೈ’ ಆಗಸ್ಟ್‌ನಲ್ಲಿ ಬಿಡುಗಡೆಯಾಗಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಹೆಚ್ಚು ಗಳಿಕೆ ಮಾಡಿತ್ತು. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್‌ ಮಾಡಿದ ಪಾತ್ರವನ್ನು ಅಜಿತ್‌ ಮಾಡಿದ್ದರು. ಎಚ್‌. ವಿನೋದ್‌ ನಿರ್ದೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.