ADVERTISEMENT

ಪೋಸ್ಟರ್‌ ವಿನ್ಯಾಸಕ ಮಸ್ತಾನ್‌ ನಿಧನ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 9:20 IST
Last Updated 21 ಏಪ್ರಿಲ್ 2021, 9:20 IST
ಮಸ್ತಾನ್‌
ಮಸ್ತಾನ್‌   

ಬೆಂಗಳೂರು: ಚಲನಚಿತ್ರ ಪೋಸ್ಟರ್‌ ವಿನ್ಯಾಸಕ ಮಸ್ತಾನ್ (63) ಅವರು ಮಂಗಳವಾರ ರಾತ್ರಿ ಹೆಸರಘಟ್ಟದ ಸಪ್ತಗಿರಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರು ಕೋವಿಡ್‌ನಿಂದ ಬಳಲುತ್ತಿದ್ದರು. 42 ವರ್ಷಗಳಿಂದ ಚಲನಚಿತ್ರ ಪೋಸ್ಟರ್‌ಗಳ ವಿನ್ಯಾಸಕರಾಗಿ ಕೆಲಸ ಮಾಡಿದ್ದರು. ಮೂರು ಚಿತ್ರಗಳನ್ನು ನಿರ್ದೇಶಿಸಿದ್ದರು.

ಶುಕ್ಲಾಂಬರದರಂ, ಕಲ್ಲೇಶಿ ಮಲ್ಲೇಶಿ, ಸಿತಾರ ಅವರ ನಿರ್ದೇಶನದ ಚಿತ್ರಗಳು. ಸುಮಾರು 2000 ಚಿತ್ರಗಳಿಗೆ ಪೋಸ್ಟರ್‌ ವಿನ್ಯಾಸಕರಾಗಿ ಕೆಲಸ ಮಾಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.