ADVERTISEMENT

ಶ್ರೀಕಾಂತ್‌ ಜೊತೆ ಪ್ರಣಮ್‌ ಮತ್ತೊಂದು ಸಿನಿಮಾ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2025, 17:00 IST
Last Updated 11 ಫೆಬ್ರುವರಿ 2025, 17:00 IST
ಪ್ರಣಮ್‌ ದೇವರಾಜ್‌ 
ಪ್ರಣಮ್‌ ದೇವರಾಜ್‌    

ನಟ ದೇವರಾಜ್ ಅವರ ಕಿರಿಯ ಪುತ್ರ ಪ್ರಣಮ್‌ ದೇವರಾಜ್ ಸದ್ಯ ‘ಸನ್ ಆಫ್‌ ಮುತ್ತಣ್ಣ’ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾ ಮಾರ್ಚ್‌ನಲ್ಲಿ ತೆರೆಕಾಣಲಿದೆ. ಇದೇ ಸಂದರ್ಭದಲ್ಲಿ ಮತ್ತೊಂದು ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದಾರೆ. 

‘ಸನ್‌ ಆಫ್‌ ಮುತ್ತಣ್ಣ’ ಸಿನಿಮಾ ನಿರ್ದೇಶಿಸಿರುವ ಶ್ರೀಕಾಂತ್‌ ಹುಣಸೂರು ಅವರೇ ಪ್ರಣಮ್‌ ನಟನೆಯ ಹೊಸ ಚಿತ್ರಕ್ಕೂ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ‘ಸನ್‌ ಆಫ್‌ ಮುತ್ತಣ್ಣ’ ಸಿನಿಮಾ ನಿರ್ಮಾಣ ಮಾಡಿದ್ದ ಪುರಾತನ ಫಿಲಂಸ್‌ ಸಂಸ್ಥೆಯೇ ಈ ಸಿನಿಮಾವನ್ನು ನಿರ್ಮಾಣ ಮಾಡಲಿದೆ. ಇದು ಪುರಾತನ ಫಿಲಂಸ್‌ನ ಎರಡನೇ ಸಿನಿಮಾವಾಗಿದ್ದು, ಸದ್ಯ ಚಿತ್ರಕ್ಕೆ ‘ಪ್ರೊಡಕ್ಷನ್‌ ನಂ.2’ ಎಂಬ ಶೀರ್ಷಿಕೆ ಇಡಲಾಗಿದೆ. ಶ್ರೀಕಾಂತ್ ಹುಣಸೂರು ಅವರೇ‌ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. 

‘ಸನ್‌ ಆಫ್‌ ಮುತ್ತಣ್ಣ’ ಚಿತ್ರದಲ್ಲಿ ತಂದೆ-ಮಗನ ಬಾಂಧವ್ಯದ ಕಥೆ ಹೇಳ ಹೊರಟಿರುವ ಶ್ರೀಕಾಂತ್, ಈ ಚಿತ್ರದ ಮೂಲಕ ಆ್ಯಕ್ಷನ್ ಹಿನ್ನೆಲೆಯಲ್ಲಿ ನಡೆಯುವ ಪ್ರೇಮ ಕಥೆಯನ್ನು ಹೇಳಿದ್ದಾರಂತೆ. ಮಾರ್ಚ್‌ನಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.