ADVERTISEMENT

ಪ್ರಿಯಾಂಕಾ ಹುಟ್ಟುಹಬ್ಬ ಕೇಕ್‌ ಬೆಲೆ ಎಷ್ಟು ಗೊತ್ತಾ?

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 19:45 IST
Last Updated 31 ಜುಲೈ 2019, 19:45 IST
ಪತಿ ನಿಕ್‌ ಜೊತೆ ಹುಟ್ಟುಹಬ್ಬ ಆಚರಿಸಿದ ನಟಿ ಪ್ರಿಯಾಂಕಾ
ಪತಿ ನಿಕ್‌ ಜೊತೆ ಹುಟ್ಟುಹಬ್ಬ ಆಚರಿಸಿದ ನಟಿ ಪ್ರಿಯಾಂಕಾ   

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗಷ್ಟೇ ತಮ್ಮ 37ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಕೆಂಪು ಬಣ್ಣದ ಗೌನ್‌ ಧರಿಸಿದ್ದ ಅವರು ಅದಕ್ಕೆ ಹೊಂದುವಂತಹ ಗೋಲ್ಡನ್‌ ಹಾಗೂ ಕೆಂಪುಮಿಶ್ರಿತ ಬಣ್ಣದ ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದರು.

ಪತಿ ನಿಕ್‌ ಜೋನಸ್‌ ಹಾಗೂ ಅವರ ಕುಟುಂಬದವರು ಮಿಯಾಮಿಯ ಕಡಲ ತೀರದಲ್ಲಿ ಪ್ರಿಯಾಂಕಾ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದರು. ಈ ಪಾರ್ಟಿಯಲ್ಲಿ ಎಲ್ಲರ ದೃಷ್ಟಿ ಕೇಕ್‌ ಮೇಲಿತ್ತು! ಮಿಯಾಮಿಯ ಪ್ರಸಿದ್ಧ ಬೇಕರಿಯೊಂದು 24 ಗಂಟೆಯಲ್ಲಿ ಅವರಿಗಾಗಿಯೇ ವಿಶೇಷವಾಗಿ ತಯಾರಿಸಿದ ಕೇಕ್‌ ಅದಾಗಿತ್ತು. ಚಿನ್ನದ ಸ್ಪರ್ಶದೊಂದಿಗೆ ಚಾಕೊಲೇಟ್ ಹಾಗೂ ವೆನಿಲಾ ಮಿಶ್ರಿತ ಕೇಕ್‌ ಬೆಲೆ ಬರೋಬ್ಬರಿ ₹3.45 ಲಕ್ಷ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT