ADVERTISEMENT

ಕರೀನಾ–ಪೃಥ್ವಿರಾಜ್‌ಗೆ ಮೇಘನಾ ಆ್ಯಕ್ಷನ್‌ ಕಟ್‌

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 21:02 IST
Last Updated 14 ಏಪ್ರಿಲ್ 2025, 21:02 IST
ಕರೀನಾ ಕಪೂರ್‌ ಖಾನ್‌ 
ಕರೀನಾ ಕಪೂರ್‌ ಖಾನ್‌    

ಪೃಥ್ವಿರಾಜ್‌ ಸುಕುಮಾರನ್‌ ‘ಲೂಸಿಫರ್‌’ ಸೀಕ್ವೆಲ್‌ ‘ಎಲ್‌–2: ಎಂಪುರಾನ್‌’ ಬಿಡುಗಡೆ ಬೆನ್ನಲ್ಲೇ ಮತ್ತೊಂದು ಪ್ರಾಜೆಕ್ಟ್‌ ಒಪ್ಪಿಕೊಂಡಿದ್ದಾರೆ. ಬಾಲಿವುಡ್‌ ನಟಿ ಕರೀನಾ ಕಪೂರ್‌ ಖಾನ್‌ ಜೊತೆ ತೆರೆ ಹಂಚಿಕೊಳ್ಳಲು ಸಜ್ಜಾಗಿರುವ ಪೃಥ್ವಿರಾಜ್‌, ‘ತಲ್ವಾರ್‌’, ‘ರಾಝಿ’ ಖ್ಯಾತಿಯ ಮೇಘನಾ ಗುಲ್ಜಾರ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ‘ದಾಯ್ರಾ’ ಚಿತ್ರದಲ್ಲಿ ನಟಿಸಲಿದ್ದಾರೆ. 

ಕ್ರೈಂ ಡ್ರಾಮಾ ಥ್ರಿಲ್ಲರ್‌ ಜಾನರ್‌ನಲ್ಲಿ ಈ ಸಿನಿಮಾವಿದೆ. ‘ಬಾಲಿವುಡ್‌ನಲ್ಲಿ 25 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದ್ದೇನೆ. ಈ ಸಂದರ್ಭದಲ್ಲಿ ಮೇಘನಾ ನಿರ್ದೇಶನದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿರುವುದು ನನ್ನ ಕನಸು ನನಸಾದಂತೆ ಆಗಿದೆ. ಪ್ರತಿಭಾನ್ವಿತ ನಟ ಪೃಥ್ವಿರಾಜ್‌ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ದೊರೆತಿರುವುದು ಈ ಪ್ರಾಜೆಕ್ಟ್‌ನ ಹೈಲೈಟ್‌. ಚಿತ್ರದ ಕಥೆ ಸೆಳೆಯುವಂತಿದ್ದು, ಅದ್ಭುತವಾದ ಸಿನಿಮಾ ಅನುಭವ ನೀಡಲಿದೆ. ಈ ಪಾತ್ರ ನಿಭಾಯಿಸುವುದು ಸವಾಲಿನ ವಿಷಯವಾಗಿದ್ದು, ಅಷ್ಟೇ ಸ್ಫೂರ್ತಿ ನೀಡುವಂತಿದೆ’ ಎಂದಿದ್ದಾರೆ ಕರೀನಾ. 

‘ತಲ್ವಾರ್‌’ ಹಾಗೂ ‘ರಾಝಿ’ ಬಳಿಕ ಜಂಗ್ಲೀ ಪಿಕ್ಚರ್ಸ್‌ ಜೊತೆಗೆ ಮೇಘನಾ ಅವರ ಮೂರನೇ ಪ್ರಾಜೆಕ್ಟ್‌ ಇದಾಗಿದೆ. ಸಿಮಾ ಅಗರ್‌ವಾಲ್‌ ಹಾಗೂ ಯಶ್‌ ಕೇಸ್ವಾನಿ ಬರವಣಿಗೆಯಲ್ಲಿ ಮೇಘನಾಗೆ ಸಾಥ್‌ ನೀಡಿದ್ದಾರೆ. ಸಿನಿಮಾ ಸದ್ಯ ಪ್ರಿಪ್ರೊಡಕ್ಷನ್‌ ಹಂತದಲ್ಲಿದೆ. 

ADVERTISEMENT
ಪೃಥ್ವಿರಾಜ್‌ 

ಈ ಚಿತ್ರದ ಕಥೆ ಕೇಳಿದ ತಕ್ಷಣ ಈ ಪಾತ್ರವನ್ನು ಮಾಡಲೇಬೇಕು ಎಂದು ನಿರ್ಧರಿಸಿದೆ. ನನ್ನ ಪಾತ್ರವು ನನ್ನನ್ನು ಸೆಳೆಯಿತು ಜನರನ್ನೂ ಸೆಳೆಯಲಿದೆ.

–ಪೃಥ್ವಿರಾಜ್‌ ನಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.