ADVERTISEMENT

ರಜನಿಕಾಂತ್ ಜೈಲರ್–2 ಘೋಷಣೆ: ಮತ್ತೆ ಅಬ್ಬರಿಸಿದ ಟೈಗರ್ ಕಾ ಹುಕುಂ!

ಇಂದು ಯೂಟ್ಯೂಬ್‌ನಲ್ಲಿ ಈ ಮಹತ್ವದ ಘೋಷಣೆ ಮಾಡಿರುವ ಚಿತ್ರ ನಿರ್ಮಾಣ ಸಂಸ್ಥೆ ಸನ್‌ ಫಿಕ್ಚರ್ಸ್ ಸುಮಾರು 4 ನಿಮಿಷದ ಅನೌನ್ಸ್‌ಮೆಂಟ್ ಟೀಸರ್ ಹಂಚಿಕೊಂಡಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜನವರಿ 2025, 12:55 IST
Last Updated 14 ಜನವರಿ 2025, 12:55 IST
<div class="paragraphs"><p>ಜೈಲರ್–2 </p></div>

ಜೈಲರ್–2

   

ಬೆಂಗಳೂರು: ಬಾಕ್ಸ್‌ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ ‘ಜೈಲರ್‌’ ಸಿನಿಮಾದ ಎರಡನೇ ಭಾಗ ‘ಜೈಲರ್–2’ ಘೋಷಣೆಯಾಗಿದೆ.

ಇಂದು ಯೂಟ್ಯೂಬ್‌ನಲ್ಲಿ ಈ ಘೋಷಣೆ ಮಾಡಿರುವ ಚಿತ್ರ ನಿರ್ಮಾಣ ಸಂಸ್ಥೆ ಸನ್‌ ಫಿಕ್ಚರ್ಸ್ ಸುಮಾರು 4 ನಿಮಿಷದ ಅನೌನ್ಸ್‌ಮೆಂಟ್ ಟೀಸರ್ ಹಂಚಿಕೊಂಡಿದೆ. ಜನಪ್ರಿಯ ಟೈಗರ್ ಕಾ ಹುಕುಂ ಬಿಜಿಎಂ ಇಲ್ಲೂ ಅಬ್ಬರ ಮಾಡಿದೆ.

ADVERTISEMENT

ಜೈಲರ್ ನಿರ್ದೇಶಿಸಿದ್ದ ನೆಲ್ಸನ್ ದಿಲೀಪ್ ಕುಮಾರ್ ಅವರೇ ಜೈಲರ್ 2 ನಿರ್ದೇಶಿಸುತ್ತಿದ್ದು ಕುತೂಹಲ ಮೂಡಿಸಿದೆ. ಎರಡು ತಿಂಗಳ ಹಿಂದಿನಿಂದ ಸಿದ್ಧತೆ ಆರಂಭವಾಗಿತ್ತು.

ಜನವರಿ ಅಂತ್ಯಕ್ಕೆ ಚಿತ್ರೀಕರಣ ಆರಂಭವಾಗಲಿದ್ದು, ಸಂಗೀತ, ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ಅನಿರುದ್ ರವಿಚಂದಿರ್ ಅವರೇ ಹೊತ್ತುಕೊಂಡಿದ್ದಾರೆ. ಉಳಿದಂತೆ ಇತರ ಮಾಹಿತಿಯನ್ನು ನಿರ್ಮಾಣ ಸಂಸ್ಥೆ ಹಂಚಿಕೊಂಡಿಲ್ಲ.

ಈ ವರ್ಷಾಂತ್ಯಕ್ಕೆ ಜೈಲರ್ 2 ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ. ಜೈಲರ್ ಚಿತ್ರ 2023ರ ಆಗಸ್ಟ್‌ 10ರಂದು ಬಿಡುಗಡೆಗೊಂಡಿತ್ತು.

‘ಜೈಲರ್‌’ ಚಿತ್ರ ಒಂದು ಕೌಟುಂಬಿಕ ಕಥಾಹಂದರವನ್ನು ಹೊಂದಿತ್ತು. ತನ್ನ ಮಗನ ಕೊಲೆ ಮಾಡಿದವರನ್ನು ಹುಡುಕುತ್ತಾ ಹೋಗುವ ನಿವೃತ್ತ ಜೈಲರ್ ಟೈಗರ್ ಮುತ್ತುವೇಲ್ ಪಾಂಡಿಯನ್(ರಜನಿಕಾಂತ್‌) ಮೇಲೆ ಕಥೆ ಕೇಂದ್ರಿತವಾಗಿದೆ . ನರಸಿಂಹನ ಪಾತ್ರದಲ್ಲಿ ನಟ ಶಿವರಾಜ್‌ಕುಮಾರ್‌ ನಟಿಸಿ ಗಮನ ಸೆಳೆದಿದ್ದರು. ಅವರು ಜೈಲರ್ 2 ದಲ್ಲಿ ಇರುವ ಬಗ್ಗೆ ಖಚಿತತೆ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.