ADVERTISEMENT

ಈ ವಾರ ತೆರೆಗೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 19:30 IST
Last Updated 21 ಮಾರ್ಚ್ 2019, 19:30 IST
‘ಮಿಸ್ಸಿಂಗ್‌ ಬಾಯ್’ ಚಿತ್ರದಲ್ಲಿ ಗುರುನಂದನ್ ಮತ್ತು ಅರ್ಚನಾ ಜಯಕೃಷ್ಣ,
‘ಮಿಸ್ಸಿಂಗ್‌ ಬಾಯ್’ ಚಿತ್ರದಲ್ಲಿ ಗುರುನಂದನ್ ಮತ್ತು ಅರ್ಚನಾ ಜಯಕೃಷ್ಣ,   

ಉದ್ಘರ್ಷ

ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಬಹುನಿರೀಕ್ಷಿತ ‘ಉದ್ಘರ್ಷ’ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳ ಭಾಷೆಯಲ್ಲಿ ತೆರೆಕಾಣುತ್ತಿದೆ.

ಡಿ. ಕ್ರಿಯೇಷನ್ಸ್ ಲಾಂಛನದಡಿ ಈ ಚಿತ್ರಕ್ಕೆ ಆರ್. ದೇವರಾಜ್ ಬಂಡವಾಳ ಹೂಡಿದ್ದಾರೆ. ಠಾಕೂರ್ ಅನೂಪ್ ಸಿಂಗ್, ತಾನ್ಯಾ ಹೋಪ್, ಸಾಯಿ ಧನ್ಸಿಕಾ, ಕಬೀರ್ ದುಹಾನ್ ಸಿಂಗ್, ಪ್ರಭಾಕರ್, ಕಿಶೋರ್, ವಂಶಿ ಕೃಷ್ಣ ತಾರಾಗಣದಲ್ಲಿದ್ದಾರೆ.

ADVERTISEMENT

ಸಂಜೋಯ್ ಚೌಧುರಿ ಸಂಗೀತ, ವೆಂಕಟ್ ಹಾಗೂ ನಭಾ ಸುಬ್ಬು ಸಾಹಸ ಸಂಯೋಜಿಸಿದ್ದಾರೆ. ಪಿ. ರಾಜನ್ ಹಾಗೂ ವಿಷ್ಣುವರ್ಧನ್ ಛಾಯಾಗ್ರಹಣ ಇದೆ. ಬಿ.ಎಸ್. ಕೆಂಪರಾಜು ಅವರ ಸಂಕಲನವಿದೆ.

ಮಿಸ್ಸಿಂಗ್ ಬಾಯ್

ಕೊಲ್ಲ ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ ಕೊಲ್ಲ ಪ್ರವೀಣ್, ಕೊಲ್ಲ ಮಹೇಶ್ ಹಾಗೂ ಹೇಮಂತಕುಮಾರ್ ರಾಚೇನಹಳ್ಳಿ ನಿರ್ಮಿಸಿರುವ ‘ಮಿಸ್ಸಿಂಗ್ ಬಾಯ್‌’ ಸಿನಿಮಾ ಬಿಡುಗಡೆಯಾಗುತ್ತಿದೆ.

ರಘುರಾಮ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಜೆ.ಎಸ್. ವಾಲಿ ಅವರ ಛಾಯಾಗ್ರಹಣವಿದೆ. ಗುರುನಂದನ್, ಅರ್ಚನಾ ಜಯಕೃಷ್ಣ, ರಂಗಾಯಣ ರಘು, ರವಿಶಂಕರ್ ಗೌಡ, ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್, ಶೋಭ್‍ರಾಜ್, ಭಾಗೀರಥಿಬಾಯಿ ತಾರಾಬಳಗದಲ್ಲಿದ್ದಾರೆ.

ಅಡಚಣೆಗಾಗಿ ಕ್ಷಮಿಸಿ

ಶ್ರೀಭೂಮಿಕ ಪ್ರೊಡಕ್ಷನ್ಸ್ ಲಾಂಛನದಡಿ ಸದ್ಗುಣಮೂರ್ತಿ ನಿರ್ಮಿಸಿರುವ ‘ಅಡಚಣೆಗಾಗಿ ಕ್ಷಮಿಸಿ’ ತೆರೆಕಾಣುತ್ತಿದೆ.

ಎಸ್. ಮಹೇಂದರ್, ಪಿ.ಎನ್. ಸತ್ಯ ಅವರೊಟ್ಟಿಗೆ ಕೆಲಸ ಮಾಡಿ ಅನುಭವವಿರುವ ಭರತ್ ಎಸ್. ನಾವುಂದ್ ಈ ಚಿತ್ರದ ನಿರ್ದೇಶಕ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿರುವ ಅವರು ಸಾಹಸ ನಿರ್ದೇಶನವನ್ನು ಮಾಡಿದ್ದಾರೆ.

ಚಿತ್ರದ ಐದು ಹಾಡುಗಳಿಗೆ ಎಸ್. ಪ್ರದೀಪ್‌ವರ್ಮ ಸಂಗೀತ ಸಂಯೋಜಿಸಿದ್ದಾರೆ. ರವಿವರ್ಮ ಅವರ ಛಾಯಾಗ್ರಹಣ ಹಾಗೂ ಅರ್ಜುನ್ ಕಿಟ್ಟು ಸಂಕಲನ ಈ ಚಿತ್ರಕ್ಕಿದೆ. ಸಂಗೀತ ನಿರ್ದೇಶಕ ಪ್ರದೀಪ್ ವರ್ಮ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಶಿವಮಂಜು, ಕೆ.ಎಸ್. ಶ್ರೀಧರ್, ಶ್ರೀನಿವಾಸಪ್ರಭು, ಅರ್ಪಿತಾ ಗೌಡ, ಮೇಘಾ ತಾರಾಬಳಗದಲ್ಲಿದ್ದಾರೆ. ಮಧುಸೂಧನ್, ಶ್ರೀನಿವಾಸ್, ಭಾರ್ಗವಿ ಕಿಶೋರ್, ನಾಗೇಶ್ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಬದ್ರಿ v/s ಮಧುಮತಿ

ಶ್ರೀದುರ್ಗಾ ಪರಮೇಶ್ವರಿ ಆರ್ಟ್ಸ್ ಲಾಂಛನದಡಿ ಪ್ರದೀಪ್ ಜಿ.ಪಿ, ಧ್ರುವಜಿತ್ ರೆಡ್ಡಿ ಹಾಗೂ ಪ್ರತಾಪ್ ಪವನ್ ನಿರ್ಮಿಸಿರುವ ‘ಬದ್ರಿ v/s ಮಧುಮತಿ’ ಚಿತ್ರ ಬಿಡುಗಡೆಯಾಗುತ್ತಿದೆ.

ಶಂಕರ್‌ ನಾರಾಯಣ್ ರೆಡ್ಡಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಎಲ್ವಿನ್ ಜೋಶ್ವಾ ಸಂಗೀತ ನೀಡಿದ್ದಾರೆ. ಶಂಕರ್ ಆರಾಧ್ಯ ಅವರ ಛಾಯಾಗ್ರಹಣವಿದೆ. ಕೆ.ಎಂ. ಪ್ರಕಾಶ್ ಅವರ ಸಂಕಲನವಿದೆ. ಡಿಫರೆಂಟ್ ಡ್ಯಾನಿ ಹಾಗೂ ವಿಕ್ರಂ ಮೋರ್ ಸಾಹಸ ನಿರ್ದೇಶಿಸಿದ್ದಾರೆ. ಭೂಷಣ್ ಅವರ ನೃತ್ಯ ನಿರ್ದೇಶನವಿದೆ. ಪ್ರತಾಪ್ ಪವನ್, ಆಕಾಂಕ್ಷಾ ಗಾಂಧಿ, ಜಹಂಗೀರ್, ಕೆಂಪೇಗೌಡ, ಜತ್ತಿ, ರವಿಕುಮಾರ್, ಅರವಿಂದ್ ಬೋಳಾರ್ ತಾರಾಗಣದಲ್ಲಿದ್ದಾರೆ.

ಶ್ರೀಅಥರ್ವಣ ಪ್ರಥ್ಯಂಗಿರ

ಶ್ರೀಅಂಗಾಳ ಪರಮೇಶ್ವರಿ ಫಿಲಂ ಪ್ರೊಡಕ್ಷನ್ಸ್ ಲಾಂಛನದಡಿ ಸಪ್ತಗಿರಿ ಅಮ್ಮ (ಏಳುಮಲೈ ಸ್ವಾಮೀಜಿ) ನಿರ್ಮಿಸಿ, ನಿರ್ದೇಶಿಸಿರುವ ಶ್ರೀಅಥರ್ವಣ ಪ್ರಥ್ಯಂಗಿರ ಚಿತ್ರ ತೆರೆಕಾಣುತ್ತಿದೆ.

ಮಹಾ ಶಕ್ತಿದೇವತೆ ಪ್ರಥ್ಯಂಗಿರ ದೇವಿ ಪವಾಡಗಳ ಕುರಿತ ಚಿತ್ರ ಇದು. ಛಾಯಾಗ್ರಹಣ ಹರಿದಾಸ್ ಮತ್ತು ಶ್ರೀಧರ್ ಕೆ. ಅವರದ್ದು. ಕರುಣಾ ಸಂಗೀತ ನೀಡಿದ್ದಾರೆ. ಮೋಹನ್, ಆರ್. ಮರಿಸ್ವಾಮಿ, ಗೀತಾ, ಮೈಸೂರು ಮಂಜು, ರಾಘವ, ರೂಪಾ, ಗಣೇಶ್, ಮಾಸ್ಟರ್ ರವೀಂದ್ರ (ಪ್ರಹ್ಲಾದ್), ಪ್ರಶಾಂತ್, ಎಸ್. ರಮ್ಯಾ ತಾರಾಬಳಗದಲ್ಲಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.