ADVERTISEMENT

ಶ್ರೀಮಂತ ಚಿತ್ರದ ರೈತ ಗೀತೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 19:46 IST
Last Updated 11 ಏಪ್ರಿಲ್ 2019, 19:46 IST

ಈ ದೇಶದ ಶ್ರೀಮಂತ ಯಾರು? ರೈತ ಅನ್ನುತ್ತದೆ ಈ ಚಿತ್ರ ತಂಡ. ಚಿತ್ರದ ಹೆಸರೇ`ಶ್ರೀಮಂತ'. ಹಂಸಲೇಖ ಅವರ ಸಂಗೀತದಲ್ಲಿ 9 ಹಾಡುಗಳು ಸಿದ್ಧವಾಗಿದೆ.ನಾರಾಯಣಪ್ಪ ಈ ಚಿತ್ರದ ನಿರ್ಮಾಪಕ.

ಯುಗಾದಿ ಹಬ್ಬದ ಪ್ರಯುಕ್ತ `ಶ್ರೀಮಂತ' ಚಿತ್ರದ ನಿರ್ದೇಶಕ ಹಾಸನ್ ರಮೇಶ್ ಅವರು ರೈತರಿಗಾಗಿಯೇ ಮಾಡಿರುವ ಒಂದು ಗೀತೆಯನ್ನು ಹಂಸಲೇಖ ಸ್ಟುಡಿಯೋ ಆವರಣದಲ್ಲಿ ಬಿಡುಗಡೆ ಮಾಡಿದ್ದಾರೆ.ಹಾಸನ್ ರಮೇಶ್ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ರೈತ ಅಂದರೆ ಹಬ್ಬ, ಉತ್ಸವ, ಸಂತೋಷ, ಸಂಭ್ರಮ. ರೈತ ಅಂದರೆ ಏನು ಎಂಬುದರ ಬಗ್ಗೆ ಹಂಸಲೇಖ ಸಾಹಿತ್ಯದಲ್ಲಿ ಈ ಹಾಡು`ರೈತರ ಬಗ್ಗೆ ರಾಷ್ಟ್ರಗೀತೆ ರೀತಿಯಲ್ಲಿ'ಮೂಡಿಬಂದಿದೆ. ಈ ರೈತ ಗೀತೆಯನ್ನು ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಅವರು ಹಾಡಿದ್ದಾರೆ.

ADVERTISEMENT

ನಾಡಿನ ಜೀವ ಅಂದರೆ ರೈತ ಎನ್ನುತ್ತಾರೆ ನಾದಬ್ರಹ್ಮ ಹಂಸಲೇಖ. ತೆನೆ ಬಿತ್ತನೆ ಮಾಡಿ ಅದನ್ನು ಬೆಳೆಸಿ ಜನರಿಗ ಆಹಾರವಾಗಿ ನೀಡುವ ಈ ರೈತನಿಗೆ ಯಾವ ಕಿರೀಟ, ಪದ್ಮಶ್ರೀ ಇಲ್ಲ. ಆತ ನಂಬಿಕೆಯಿಂದ ಬಿತ್ತನೆ ಮಾಡುತ್ತಾನೆ. ಕಾಲ ಕಾಲಕ್ಕೂ ಈ ರೈತನನ್ನು ಆಳುವವರೇ ಹೆಚ್ಚು. ಆತ ಅಲ್ಲೇ ಇದ್ದಾನೆ. ಹೃದಯದಲ್ಲಿ ವಾಸ್ತವವಾಗಿ ಆತನೇ `ಶ್ರೀಮಂತ' ಎನ್ನುತ್ತಾರೆಹಂಸಲೇಖ.

ಶೇಕಡ 20ರಷ್ಟು ಚಿತ್ರೀಕರಣ ಬಾಕಿ ಇದ್ದು, ಜೂನ್ ಅಥವಾ ಜುಲೈನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎನ್ನುತ್ತಾರೆ ನಿರ್ದೇಶಕ ಹಾಸನ್ ರಮೇಶ್.

ಕ್ರಾಂತಿ, ವೈಷ್ಣವಿ ಮೆನನ್ ತಾರಾಗಣದಲ್ಲಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಅರವಿಂದ ಮಾಲಗತ್ತಿ ಅವರ ಒಂದು ಹಾಡು, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ, ಡಿಫರೆಂಟ್ ಡ್ಯಾನಿ ಹಾಗೂ ಮಾಸ್ ಮಾದ ಸಾಹಸ ಈ ಚಿತ್ರಕ್ಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.