ADVERTISEMENT

ಹೊಸಬರ ‘ರಿಕ್ಷಾ ಚಾಲಕ’

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 12:33 IST
Last Updated 13 ಏಪ್ರಿಲ್ 2025, 12:33 IST
ನಂದಿನಿ
ನಂದಿನಿ   

ಆಟೋ ಚಾಲಕರ ವೈಯಕ್ತಿಕ ಜೀವನ, ನೋವು ನಲಿವಿನ ಕುರಿತಾದ ಕಥೆ ಹೊಂದಿರುವ ‘ರಿಕ್ಷಾ ಚಾಲಕ’ ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಆಯುಷ್ ಶಶಿಕುಮಾರ್ ಚಿತ್ರದ ನಿರ್ದೇಶಕ. 

‘ಕರೋನಾದಿಂದ ಲಾಕ್ಡೌನ್ ಆದಾಗ ರಿಕ್ಷಾ ಚಾಲಕರು ಎದುರಿಸಿದ ಸಂಕಷ್ಟ, ಅನುಭವಿಸಿದ ನೋವುಗಳನ್ನೇ ಸಿನಿಮಾವಾಗಿಸಿದ್ದೇವೆ. ಮೈಸೂರು, ವರುಣಾ, ಕೆ.ಆರ್.ನಗರ, ಸಾಲಿಗ್ರಾಮ ಹಾಗೂ ಮುರುಡೇಶ್ವರದಲ್ಲಿ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ. ಚಿತ್ರಕ್ಕೆ ಸೆನ್ಸಾರ್‌ನಿಂದ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಶೀಘ್ರದಲ್ಲಿಯೇ ಚಿತ್ರ ತೆರೆಗೆ ಬರಲಿದೆ’ ಎಂದರು ಆಯುಷ್‌.

ಯುವ ನಟ ಚಿರಂತ್‌ಗೆ ನಂದಿನಿ ಜೋಡಿಯಾಗಿದ್ದಾರೆ. ಬಲ ರಾಜವಾಡಿ, ಚಂದ್ರಪ್ರಭ, ಮಿಮಿಕ್ರಿ ಗೋಪಿ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಶರಾವತಿ ಶಶಿಕುಮಾರ್ ಬಂಡವಾಳ ಹೂಡಿದ್ದು, ವೇದಾಂತ್ ಅತಿಶಯ್ ಜೈನ್ ಸಂಗೀತವಿದೆ. ಆನಂದ್ ಛಾಯಾಚಿತ್ರಗ್ರಹಣ, ವಂಶಿ ಸಂಕಲನವಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.