ADVERTISEMENT

ಶ್ರದ್ಧಾ ಮುಂದಿನ ವರ್ಷ ಮದ್ವೆ ಆಗ್ತಾಳಂತೆ!

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 19:45 IST
Last Updated 15 ಜುಲೈ 2019, 19:45 IST
.
.   

ನಟಿ ಶ್ರದ್ಧಾ ಕಪೂರ್‌ 2020ಕ್ಕೆ ತಮ್ಮ ಬಾಲ್ಯದ ಗೆಳೆಯ ರೋಹನ್‌ ಶ್ರೇಷ್ಠ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

‘ಸಾಹೊ’ ಹಾಗೂ ‘ಸ್ಟ್ರೀಟ್‌ ಡಾನ್ಸರ್‌ 3ಡಿ’ ಚಿತ್ರಗಳು ಬಿಡುಗಡೆಯಾದ ನಂತರ ಶ್ರದ್ಧಾ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸದ್ಯ ಸಾಹೊ ಚಿತ್ರೀಕರಣದಲ್ಲಿ ನಟಿ ಬ್ಯುಸಿಯಾಗಿದ್ದಾರೆ.

‘ಆಶಿಕಿ 2’ ಹಾಗೂ ‘ಓಕೆ ಜಾನು’ ಚಿತ್ರದ ಸಮಯದಲ್ಲಿ ಶ್ರದ್ಧಾ ಹೆಸರು ಆದಿತ್ಯ ರಾಯ್‌ ಕಪೂರ್‌ ಜೊತೆ ಕೇಳಿಬಂದಿತ್ತು. ಬಳಿಕ ಫರ್ಹಾನ್‌ ಅಖ್ತರ್‌ ಜೊತೆ ಡೇಟಿಂಗ್‌ ನಡೆಸುತ್ತಿದ್ದಾರೆ ಎಂಬ ಗಾಳಿಸುದ್ದಿ ಹರಿದಾಡಿತ್ತು.

ADVERTISEMENT

ಇತ್ತೀಚೆಗೆ ರೋಹನ್‌ ಶ್ರೇಷ್ಠ ಜೊತೆ ಓಡಾಡುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿ ಮಾಡುತ್ತಿವೆ. ತಮ್ಮಿಬ್ಬರ ಸಂಬಂಧದ ಬಗ್ಗೆ ಅವರು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಈ ವರ್ಷ ಡಿಸೆಂಬರ್‌ನಲ್ಲಿ ಅವರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಈ ಮದುವೆ ಸುದ್ದಿಯನ್ನು ಶಕ್ತಿಕಪೂರ್‌ ಅಲ್ಲಗೆಳೆದಿದ್ದರು.

ಈಗ ತಾವು ಒಪ್ಪಿಕೊಂಡಿರುವ ಎರಡು ಸಿನಿಮಾದ ಕೆಲಸಗಳು ಮುಗಿದ ಬಳಿಕ ನಟಿ ಮದುವೆಯಾಗುತ್ತಿದ್ದಾರೆ. ‘ಸಾಹೊ’ ಚಿತ್ರವು ಆಗಸ್ಟ್‌ ತಿಂಗಳಲ್ಲಿ ಬಿಡುಗಡೆಯಾಗುತ್ತಿದ್ದರೆ, ‘ಸ್ಟ್ರೀಟ್‌ ಡಾನ್ಸರ್‌ 3ಡಿ’ 2020ರ ಜನವರಿ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರಗಳ ಬಿಡುಗಡೆ ನಂತರ ಶ್ರದ್ಧಾ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ, ‘ಸಾಹೊ’ ಶ್ರದ್ಧಾ ಕಪೂರ್‌ ವೃತ್ತಿಜೀವನದ ದೊಡ್ಡ ಚಿತ್ರ. ಈ ಚಿತ್ರ ಬಿಡುಗಡೆಯಾದ ಬಳಿಕ ಹೆಚ್ಚು ಹೆಚ್ಚು ಅವಕಾಶಗಳು ಅವರನ್ನು ಹುಡುಕಿಕೊಂಡು ಬರಲಿವೆ. ಈ ವೇಳೆ ಅವರು ಮದುವೆಯಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆಯೇ ಎಂಬುದು ಅವರ ಅಭಿಮಾನಿಗಳ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.