ADVERTISEMENT

ವಿಶ್ವಕಪ್ ವೇಳೆಗೆ ‘ಓ ಬೇಬಿ...’

Samantha Akkineni

​ಪ್ರಜಾವಾಣಿ ವಾರ್ತೆ
Published 21 ಮೇ 2019, 9:40 IST
Last Updated 21 ಮೇ 2019, 9:40 IST
ಸಮಂತಾ ಪ್ರಭು ಅಕ್ಕಿನೇನಿ
ಸಮಂತಾ ಪ್ರಭು ಅಕ್ಕಿನೇನಿ   

ಸಾಮಾನ್ಯವಾಗಿ ಸಿನಿಮಾ ಮಂದಿ ಕ್ರಿಕೆಟ್ ಪಂದ್ಯಾವಳಿಗಳ ಸಮಯದಲ್ಲಿ ಚಿತ್ರ ಬಿಡುಗಡೆಯ ರಿಸ್ಕ್ ತೆಗೆದುಕೊಳ್ಳುವುದು ಕಡಿಮೆ. ಅದರಲ್ಲೂ ವಿಶ್ವಕಪ್ ವೇಳೆಗೆ ಅದು ದೊಡ್ಡ ಹೀರೊ ಚಿತ್ರವಾಗಿರಲಿ ಬಿಡುಗಡೆ ಮಾಡುವುದಿಲ್ಲ. ಆದರೆ, ಈ ಟ್ರೆಂಡ್ ಅನ್ನು ‘ಓ ಬೇಬಿ! ಯೆಂತ ಸಕ್ಕಗುನ್ನವೆ’ ಸಿನಿಮಾ ಸಹ ನಿರ್ಮಾಪಕ ಸುರೇಶ್ ಬಾಬು ಮುರಿಯಬೇಕೆಂದುಕೊಂಡಿದ್ದಾರೆ.

ನಟಿ ಸಮಂತಾ ಪ್ರಭು ಅಕ್ಕಿನೇನಿ ಪ್ರಧಾನ ಪಾತ್ರದಲ್ಲಿರುವ ‘ಓ ಬೇಬಿ..’ ಕೊರಿಯನ್ ಚಿತ್ರ ‘ಮಿಸ್ ಗ್ರ್ಯಾನಿ’ಯ ರಿಮೇಕ್. 70 ವರ್ಷದ ಮುದುಕಿಯೊಬ್ಬಳು 20 ಹರೆಯದ ಹುಡುಗಿಯ ಮೈ ಸೇರಿಕೊಳ್ಳುವ ಹಾಸ್ಯಧಾಟಿಯ ಸಿನಿಮಾ ಇದಾಗಿದ್ದು, ಚಿತ್ರವನ್ನು ನಂದಿನಿ ರೆಡ್ಡಿ ನಿರ್ದೇಶಿಸಿದ್ದಾರೆ.

ಮೇ 30ರಿಂದ ವಿಶ್ವಕಪ್ ಆರಂಭವಾಗಲಿದೆ. ಇದೇ ಸಮಯದಲ್ಲಿಯೇ ‘ಓ ಬೇಬಿ’ ತೆರೆ ಕಾಣಲಿದೆ ಎನ್ನುತ್ತವೆ ಚಿತ್ರತಂಡದ ಮೂಲಗಳು. ಸಿನಿಮಾದ ನಿರ್ಮಾಪಕಿಯೂ ಆಗಿರುವ ಸಮಂತಾ ಕೂಡಾ ಈ ರಿಸ್ಕ್ ತೆಗೆದುಕೊಳ್ಳಲು ಮುಂದಾಗಿದ್ದು, ಈಗಾಗಲೇ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆ.

ADVERTISEMENT

2019 ಸಮಂತಾ ಪಾಲಿಗೆ ಅದೃಷ್ಟ ತಂದಿದ್ದು, ಐದು ತಿಂಗಳಲ್ಲಿ ಸಮಂತಾಳ ‘ಸೂಪರ್ ಡೀಲಕ್ಸ್’ ಮತ್ತು ’ಮಜಲಿ’ ಸಿನಿಮಾಗಳು ತೆರೆ ಕಂಡು ಯಶಸ್ಸು ಗಳಿಸಿವೆ. ಈಗ ‘ಓ ಬೇಬಿ...’ ಸಮಂತಳಾ ಕೈ ಹಿಡಿಯುವಳೇ ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.