ಗ್ರಾಮೀಣ ಸೊಗಡಿನ ಕಥೆಯೊಂದನ್ನು ಹೊಂದಿರುವ ‘ಕುಂಟೆಬಿಲ್ಲೆ’ ಚಿತ್ರ ತೆರೆಗೆ ಬರಲು ಸಿದ್ಧವಿದೆ. ಜಿಬಿಎಸ್ ಸಿದ್ದೇಗೌಡ ಚಿತ್ರದ ನಿರ್ದೇಶಕ.
‘ಮೈಸೂರು ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ಪೋಸ್ಟ್‌ಪ್ರೊಡಕ್ಷನ್ ಕೆಲಸ ಮುಗಿಸಿ ಸೆನ್ಸಾರ್‌ಗೆ ಸಿದ್ಧವಿದೆ. ಮುಂದಿನ ತಿಂಗಳು ಬಿಡುಗಡೆ ಆಲೋಚನೆಯಿದೆ. ಹಳ್ಳಿ ಜನಜೀವನ, ಸಂಸ್ಕೃತಿ ಜತೆಗೆ ಪ್ರೇಮಕಥೆಯಿದೆ’ ಎನ್ನುತ್ತಾರೆ ನಿರ್ದೇಶಕರು.
ನಾಯಕ ಯದುವಿಗೆ ನಾಯಕಿಯಾಗಿ ಮೇಘಶ್ರೀ ಜತೆಯಾಗಿದ್ದಾರೆ. ಎಸ್.ಬಿ.ಶಿವು,ಕುಮಾರ್ ಗೌಡ ಬಂಡವಾಳ ಹೂಡಿದ್ದಾರೆ. ಹರಿಕಾವ್ಯ ಸಂಗೀತ, ಮುಂಜಾನೆ ಮಂಜು ಛಾಯಾಚಿತ್ರಗ್ರಹಣ, ಸುಜಿತ್ ಸಂಕಲನ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.