ADVERTISEMENT

ಪೋಷಕ ನಟ ಸತ್ಯ ಉಮ್ಮತ್ತಾಲ್‌ ನಿಧನ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 1:56 IST
Last Updated 4 ಜೂನ್ 2022, 1:56 IST
ಸತ್ಯ ಉಮ್ಮತ್ತಾಲ್‌
ಸತ್ಯ ಉಮ್ಮತ್ತಾಲ್‌   

ಬೆಂಗಳೂರು: ಪೋಷಕ ನಟ, ನಿರ್ದೇಶಕ ಯೋಗರಾಜ್‌ ಭಟ್‌ ಅವರ ಮಾವ (ಪತ್ನಿ ತಂದೆ) ಸತ್ಯ ಉಮ್ಮತ್ತಾಲ್‌ (69) ಶುಕ್ರವಾರ ನಗರದಲ್ಲಿ ಹೃದಯಾಘಾತದಿಂದನಿಧನರಾದರು.

ಅವರು ಯೋಗರಾಜ್ ಭಟ್ ಕುಟುಂಬದೊಂದಿಗೆ ವಾಸವಿದ್ದರು. ಸತ್ಯ ಅವರು ಪತ್ನಿ ರಾಜೇಶ್ವರಿ, ಪುತ್ರಿ, ಇಬ್ಬರು ಮೊಮ್ಮಕ್ಕಳಿದ್ದಾರೆ.

ಸತ್ಯಣ್ಣ ಎಂದೇ ಗುರುತಿಸಿಕೊಂಡಿದ್ದ ಅವರು ಪೋಷಕ ಪಾತ್ರಗಳ ಮೂಲಕ ಗಮನಸೆಳೆದಿದ್ದರು. ‘ಟಗರು’, ‘ಕಡ್ಡಿಪುಡಿ’, ‘ಪಂಚತಂತ್ರ’, ಗಣೇಶ್‌ ನಟನೆಯ ‘ಮುಗುಳುನಗೆ’,ಮಂಸೋರೆ ನಿರ್ದೇಶನದ ‘ಆ್ಯಕ್ಟ್‌–1978’, ‘ಸಲಗ’ ಸೇರಿದಂತೆ 60ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಅಮರಪ್ರೇಮಿ ಅರುಣ್’, ‘ಗಾಳಿಪಟ–2’ಸೇರಿ ಹತ್ತಕ್ಕೂ ಹೆಚ್ಚು ಚಿತ್ರಗಳು ಇನ್ನೂ ತೆರೆಗೆ ಬರಬೇಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.