ADVERTISEMENT

ಕೊಟ್ರೇಶ್‌ ಚಿತ್ರಕ್ಕೆ ಶಿವಣ್ಣ ಜೈ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 8:09 IST
Last Updated 22 ಅಕ್ಟೋಬರ್ 2020, 8:09 IST
ಶಿವರಾಜ್‌ಕುಮಾರ್
ಶಿವರಾಜ್‌ಕುಮಾರ್   

ನಟ ಶಿವರಾಜ್‌ ಕುಮಾರ್‌ ಅವರು ಕೊಟ್ರೇಶ್‌ ಚಪ್ಪರದಹಳ್ಳಿ ನಿರ್ದೇಶನದ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಅಂದಹಾಗೆ ಕೊಟ್ರೇಶ್‌ ನಿರ್ದೇಶನದ ಮೊದಲ ಚಿತ್ರ ಇದು. ಕೊಟ್ರೇಶ್‌ ಅವರು ಈ ಮೊದಲು ಎ.ಹರ್ಷ ಮತ್ತು ಯೋಗಿ ಜಿ. ರಾಜ್‌ ಅವರ ತಂಡದಲ್ಲಿ ಸಹನಿರ್ದೇಶಕರಾಗಿ ಕೆಲಸ ಮಾಡಿದವರು. ಈ ಚಿತ್ರದ ಶೂಟಿಂಗ್‌ ನವೆಂಬರ್‌ನಲ್ಲಿ ಆರಂಭವಾಗುವ ಸಾಧ್ಯತೆ ಇದೆ.

‘ಗಟ್ಟಿಯಾದ ಸಾಮಾಜಿಕ ವಸ್ತುವುಳ್ಳ ಕಥೆ ಈ ಚಿತ್ರದಲ್ಲಿದೆ. ಆದರೆ ಚಿತ್ರ ತಂಡದ ಮೂಲಗಳು ಹೇಳುವ ಪ್ರಕಾರ, ರಾಜಕೀಯ ಥ್ರಿಲ್ಲರ್‌ ಹಾಗೂ ಸಮಾಜದಲ್ಲಿ ನಡೆಯುವ ಪ್ರಸ್ತುತ ಸನ್ನಿವೇಶಗಳ ಕುರಿತ ವಿಷಯ ಒಳಗೊಂಡಿದೆ’ ಎಂದು ಹೇಳಿವೆ.

ಕೊಟ್ರೇಶ್‌ ಅವರು ಶಿವರಾಜ್‌ ಅವರ ಕಟ್ಟಾ ಅಭಿಮಾನಿಯೂ ಹೌದು. ಶಿವರಾಜ್‌ ಅವರು ಸದ್ಯ ವಿಜಯ್‌ ಮಿಲ್ಟನ್‌ ಅವರ ಚಿತ್ರದಲ್ಲಿ ನಿರತರಾಗಿದ್ದಾರೆ. ಅದು ಮುಗಿದ ಬಳಿಕ ಕೊಟ್ರೇಶ್‌ ಅವರ ಚಿತ್ರದಲ್ಲಿ ಭಾಗವಹಿಸಲಿದ್ದಾರೆ ಎಂದು ಇದೇ ಮೂಲಗಳು ಹೇಳಿವೆ.

ADVERTISEMENT

ಶಿವರಾಜ್‌ ಅವರು ಇತ್ತೀಚೆಗೆ ಹರ್ಷ ಅವರ ಭಜರಂಗಿ-2 ಚಿತ್ರವನ್ನು ಪೂರ್ಣಗೊಳಿಸಿದ್ದಾರೆ. ಅದು ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ರವಿ ಅರಸು ಅವರ ಆರ್‌ಡಿಎಕ್ಸ್‌ ಚಿತ್ರದ ಕೆಲಸಗಳೂ ಆರಂಭವಾಗಿವೆ. ಅದನ್ನು ಮುಂದಿನ ವರ್ಷದ ಆರಂಭದಲ್ಲಿ ಕೈಗೊಳ್ಳಲು ತಂಡ ನಿರ್ಧರಿಸಿದೆ.

ವಿಜಯ್‌ ಮಿಲ್ಟನ್‌ ಅವರ ಚಿತ್ರದಲ್ಲಿ ಶಿವರಾಜ್‌ ಕುಮಾರ್‌ ಅವರು ಟಗರು ಚಿತ್ರದ ಸಹ ಕಲಾವಿದ ಧನಂಜಯ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಧನಂಜಯ ಅವರು ಸದ್ಯ ತಮ್ಮ ನಿರ್ಮಾಣದ ‘ಭಡವ ರ‍‍್ಯಾಸ್ಕಲ್’ ಚಿತ್ರದಲ್ಲಿ ಬ್ಯುಸಿ‌ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.