ಜೀ5ನಲ್ಲಿ ಪ್ರಸಾರವಾದ ನಟಿ ಖುಷಿ ರವಿ ನಟನೆಯ ‘ಅಯ್ಯನ ಮನೆ’ ವೆಬ್ ಸರಣಿ ಕನ್ನಡದಲ್ಲಿ ವೆಬ್ ಸರಣಿ ಪರಂಪರೆಗೆ ಹೊಸ ತಿರುವು ನೀಡಿತ್ತು. ‘ಅಯ್ಯನ ಮನೆ’ ಯಶಸ್ಸಿನ ಬೆನ್ನಲ್ಲೇ ಜೀ5 ಮತ್ತೊಂದು ಕನ್ನಡದ ವೆಬ್ ಸರಣಿ ಘೋಷಿಸಿದೆ. ‘ಶೋಧ’ ಎಂಬ ಶೀರ್ಷಿಕೆಯ ಈ ಸರಣಿಯನ್ನು ಆ.22ರಿಂದ ವೀಕ್ಷಿಸಬಹುದಾಗಿದೆ.
ಈ ವೆಬ್ ಸರಣಿಗೆ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ. ಗೌಡ ನೇತೃತ್ವದ ಕೆಆರ್‌ಜಿ ಸ್ಟುಡಿಯೊಸ್ ಬಂಡವಾಳ ಹೂಡಿದೆ. ಕೆಆರ್‌ಜಿ ಸ್ಟುಡಿಯೊಸ್ ನಿರ್ಮಿಸಿ, ಪ್ರಸ್ತುತಪಡಿಸುತ್ತಿರುವ ‘ಶೋಧ’ ವೆಬ್ ಸರಣಿಗೆ ಸುನಿಲ್ ಮೈಸೂರು ನಿರ್ದೇಶನವಿದೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ‘ಮನಸಾರೆ’, ‘ಪಂಚರಂಗಿ’, ‘ಲೈಫು ಇಷ್ಟೇನೆ’, ‘ಯೂಟರ್ನ್’, ‘ಧೂಮಂ’ ಮತ್ತು ‘ಲೂಸಿಯಾ’ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಟ, ನಿರ್ದೇಶಕ ಪವನ್ ಕುಮಾರ್ ಈ ವೆಬ್ ಸರಣಿಯಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ.
‘ಈ ವೆಬ್ ಸರಣಿಯಲ್ಲಿ ನಟಿಸುವುದು ನನಗೆ ಸಂಪೂರ್ಣವಾಗಿ ಹೊಸ ಪ್ರಯಾಣ. ಬರವಣಿಗೆ ಮತ್ತು ನಿರ್ದೇಶನದಿಂದ ಬಂದ ನಂತರ ಕ್ಯಾಮೆರಾ ಮುಂದೆ ಹೆಜ್ಜೆ ಹಾಕಿದ್ದೇನೆ. ಇದು ಹೊಸ ಸವಾಲುಗಳನ್ನು ಮುಂದಿಟ್ಟಿದೆ’ ಎಂದಿದ್ದಾರೆ ಪವನ್ ಕುಮಾರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.