‘ಸೂಪರ್ 30’ ಚಿತ್ರದಲ್ಲಿ ಹೃತಿಕ್ ರೋಷನ್ ನನ್ನ ಪಾತ್ರಕ್ಕೆ ಜೀವ ತುಂಬಿದ್ದಾರೆ.ಹೃತಿಕ್ ಪರಾಕಾಯ ಪ್ರವೇಶ ಮಾಡಿದ್ದಾರೆ. ನನ್ನ ನಿರೀಕ್ಷೆಗಳನ್ನೂ ಮೀರಿ ಅವರು ಅದ್ಭುತವಾಗಿ ನಟಿಸಿದ್ದಾರೆ ಎಂದು ಗಣಿತಜ್ಞಆನಂದ್ ಕುಮಾರ್ ಸಂತಸ ಹಂಚಿಕೊಂಡಿದ್ದಾರೆ.
ಬಿಹಾರದಲ್ಲಿ ಐಐಟಿ-ಜೆಇಇ ಪ್ರವೇಶ ಪರೀಕ್ಷೆಗೆ ಬಡ ಮಕ್ಕಳಿಗೆ ಉಚಿತ ತರಬೇತಿ ಕೇಂದ್ರ ನಡೆಸುತ್ತಿರುವ ಆನಂದ್ ಕುಮಾರ್ ಜೀವನಕತೆಯನ್ನು ಆಧರಿಸಿದ ಚಿತ್ರವಿದು. 'ಕೋಚಿಂಗ್ ಸೆಂಟರ್‌ನ ಹಳೆಯ ವಿದ್ಯಾರ್ಥಿಗಳು ಟ್ರೇಲರ್ ನೋಡಿ ಫೋನ್, ವಾಟ್ಸ್ಯಾಪ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೃತಿಕ್ ಪಾಠ ಮಾಡುವ ದೃಶ್ಯ ನೋಡಿ ನಾವು ಕಲಿತ ಕ್ಷಣಗಳು ನೆನಪಾಯಿತು ಎಂದು ಹಳೆ ದಿನಗಳನ್ನು ನೆನಪಿಸಿಕೊಂಡಿದ್ದಾರೆ’ ಎಂದು ಆನಂದ್ ಹೇಳಿದ್ದಾರೆ.
ಪಾತ್ರಕ್ಕಾಗಿ ಅವರು ವಿಶೇಷ ಪ್ರಯತ್ನಗಳನ್ನು ಮಾಡುತ್ತಾರೆ. ಅವರ ಯೋಚನೆಯೂ ಇತರರಿಗಿಂತ ವಿಭಿನ್ನ. ಪಾತ್ರಕ್ಕಾಗಿ ಅವರು ಅನೇಕ ಸಲ ನನ್ನ ಜೊತೆ ಕುಳಿತುಕೊಂಡು ಚರ್ಚಿಸಿದ್ದಾರೆ. ಹಾಗೇ ಕೆಲವೊಮ್ಮೆ ನಿಜ ಜೀವನದ ವಿಡಿಯೊಗಳನ್ನು ನನ್ನಿಂದ ಪಡೆದುಕೊಂಡು ಪಾತ್ರಕ್ಕಾಗಿ ತಯಾರಿ ನಡೆಸಿದ್ದಾರೆ. ನಾನು ಯಾವ ರೀತಿ ಕೈ ತಿರುಗಿಸುತ್ತಿನೋ ಅದೇ ರೀತಿ ಹೃತಿಕ್ ಕೂಡ ಅಭಿನಯಿಸಿದ್ದಾರೆ. ಅಷ್ಟರ ಮಟ್ಟಿಗೆ ಅನುಕರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆನಂದ್ ಕುಟುಂಬ ಸದಸ್ಯರೂ ಕೂಡ ಹೃತಿಕ್ ನಟನೆಯನ್ನು ಮೆಚ್ಚಿಕೊಂಡಿದ್ದಾರಂತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.