ADVERTISEMENT

ಸಿನಿ ಸುದ್ದಿ: ‘ದಿ’ ಚಿತ್ರದ ಟ್ರೇಲರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 13 ಮೇ 2025, 3:54 IST
Last Updated 13 ಮೇ 2025, 3:54 IST
   

ವಿನಯ್‌ ವಾಸುದೇವ್‌ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ‘ದಿ’ ಸಿನಿಮಾ ಮೇ 16ರಂದು ತೆರೆಕಾಣುತ್ತಿದ್ದು, ಚಿತ್ರದ ಟ್ರೇಲರ್‌ ಅನ್ನು ಇತ್ತೀಚೆಗೆ ನಟ ಮಂಡ್ಯ ರಮೇಶ್‌ ಬಿಡುಗಡೆಗೊಳಿಸಿದರು. 

ವಿ.ಡಿ.ಕೆ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ‘ಈ ಚಿತ್ರಕ್ಕೆ ‘ದಿ’ ಎಂಬ ಹೆಸರು ಇಡಲು ಹಲವು ಕಾರಣಗಳಿವೆ. ಚಿತ್ರದಲ್ಲಿ ನಾಯಕನ ಹೆಸರು ‘ದೀಪು’. ನಾಯಕಿಯಾಗಿ ನಟಿಸಿರುವ ದಿಶಾ ರಮೇಶ್‌ ಹೆಸರಿನಲ್ಲೂ ಈ ಅಕ್ಷರವಿದೆ. ದೇವರಾಯನ ದುರ್ಗ, ದೇವರಮನೆ ಮುಂತಾದ ಕಡೆ ಚಿತ್ರದ ಚಿತ್ರೀಕರಣ ನಡೆದಿದೆ. ಇವುಗಳಲ್ಲೂ ‘ದ’ ಅಕ್ಷರವಿದೆ. ಜೊತೆಗೆ ನಾನು ಸುದೀಪ್‌ ಅವರ ಅಭಿಮಾನಿ. ಹೀಗಾಗಿ ಈ ಶೀರ್ಷಿಕೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದೇನೆ. ಜೊತೆಗೆ ನಾಯಕನಾಗೂ ನಟಿಸಿದ್ದೇನೆ’ ಎಂದರು ವಿನಯ್ ವಾಸುದೇವ್.

‘ಚಿತ್ರದ ಕಥೆ ಬಹಳ ಕುತೂಹಲಕಾರಿಯಾಗಿದೆ. ಟ್ರೇಲರ್‌ನಲ್ಲಿ ಇನ್ನೂ ಚೆನ್ನಾಗಿ ಕಥೆಯು ಮೂಡಿಬಂದಿದೆ’ ಎಂದರು ದಿಶಾ ರಮೇಶ್‌. ಹರಿಣಿ ಶ್ರೀಕಾಂತ್‌, ನಾಗೇಂದ್ರ ಅರಸ್‌, ಡಾಲಾ ಶರಣ್‌, ಕಲಾರತಿ ಮಹಾದೇವ್‌ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಅಲೆನ್‌ ಭರತ್‌ ಛಾಯಾಚಿತ್ರಗ್ರಹಣ, ಸಿದ್ಧಾರ್ಥ್‌ ಆರ್‌. ನಾಯಕ್‌ ಸಂಕಲನ, ಯು.ಎಂ.ಸ್ಟೀವನ್‌ ಸತೀಶ್‌ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ವಿಜಯ್ ಫಿಲಂಸ್ ಚಿತ್ರವನ್ನು ಹಂಚಿಕೆ ಮಾಡುತ್ತಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.