ADVERTISEMENT

ಮದಕರಿಪುರ ಚಿತ್ರಕ್ಕೆ ಯು/ಎ ಪ್ರಮಾಣಪತ್ರ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2020, 19:30 IST
Last Updated 7 ಡಿಸೆಂಬರ್ 2020, 19:30 IST
ಆರ್ಗವಿ ರಾಯ್‌
ಆರ್ಗವಿ ರಾಯ್‌   

ರಾಧಾಕೃಷ್ಣ ಪಲ್ಲಕ್ಕಿ ನಿರ್ದೇಶಿಸಿ ನಟಿಸಿರುವ ‘ಮದಕರಿಪುರ’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ ಪ್ರಮಾಣ ಪತ್ರ ನೀಡಿದ್ದು, ಚಿತ್ರ ಸದ್ಯದಲ್ಲೇ ತೆರೆಕಾಣುವ ನಿರೀಕ್ಷೆ ಇದೆ.

ವಾಲ್ಮೀಕಿ ರಾಮಾಯಣದ ಎಳೆಯೂ ಈ ಚಿತ್ರದಲ್ಲಿದೆ. ಕಾಮಿಡಿ, ಮರ್ಡರ್ ಮಿಸ್ಟ್ರಿ ಕಥೆ ಮತ್ತು ನೈಜ ಘಟನೆಗಳನ್ನು ಆಧರಿಸಿರುವ ಅಪ್ರಕಟಿತ ಕಾದಂಬರಿ –ನಾಟಕ ‘ಗಿಡ್ಡೋಬಾ ಮಾತಾಡ್ತಾನೆ’ ಆಧರಿಸಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ ಹಾಗೂ ಹಾಡುಗಳ ಸಾಹಿತ್ಯ ಪಲ್ಲಕ್ಕಿ ಅವರದು.

ಬೆಂಗಳೂರು ಸುತ್ತಮುತ್ತ, ಹಿರಿಯೂರು, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ನಂದಿಗ್ರಾಮ ಹಾಗೂ ಕೈವಾರ ತಾತಯ್ಯ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆದಿದೆ. ತಾತಾ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಈ ಚಿತ್ರ ನಿರ್ಮಿಸಲಾಗಿದೆ. ಆರ್ಗವಿ ರಾಯ್‌ ನಾಯಕಿಯಾಗಿ ನಟಿಸುತ್ತಿದ್ದಾರೆ.

ADVERTISEMENT

ತಾರಾಗಣದಲ್ಲಿ ರಾಧಾಕೃಷ್ಣ ಪಲ್ಲಕ್ಕಿ ಜತೆಗೆ ಪ್ರಕಾಶ್ ಅರಸ್, ಎಂ.ಕೆ. ಮಠ, ಶ್ರೀನಿವಾಸ ಗುರೂಜಿ, ನೈಋತ್ಯ, ಸೀನೂ ಮಾರ್ಕಾಳಿ, ವಿನಯ್ ಬಲರಾಮ್, ಅರ್ಗವಿ ರಾಯ್, ರೆಡ್ಡಿ ಹಿರಿಯೂರ್, ಸವಿತಾ ಚಿನ್ಮಯಿ, ವೆಂಕಟಾಚಲ‌ ಹಾಗೂ ಪಲ್ಲಕ್ಕಿ ಫಿಲಂ ಇನ್‌ಸ್ಟಿಟ್ಯೂಟ್ ವಿದ್ಯಾರ್ಥಿಗಳು ಇದ್ದಾರೆ.

ಛಾಯಾ ಗ್ರಹಣ ರಾಜಾ ಶಿವಶಂಕರ್, ಸಂಗೀತ ಸ್ಯಾಮ್, ಸಂಕಲನ ಗೌತಮ್ ಪಲ್ಲಕ್ಕಿ, ಸಾಹಸ ಡಿಫರೆಂಟ್ ಡ್ಯಾನಿ, ನೃತ್ಯ ತ್ರಿಭುವನ್ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.