ADVERTISEMENT

ಶೂಟಿಂಗ್‌ ಪೂರ್ಣಗೊಳಿಸಿದ ‘ಝೀಬ್ರಾ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2023, 0:36 IST
Last Updated 21 ನವೆಂಬರ್ 2023, 0:36 IST
ಧನಂಜಯ ಹಾಗೂ ಸತ್ಯದೇವ್‌ 
ಧನಂಜಯ ಹಾಗೂ ಸತ್ಯದೇವ್‌    

‘ಡಾಲಿ’ ಧನಂಜಯ ಹಾಗೂ ಸತ್ಯದೇವ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಝೀಬ್ರಾ’ದ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಆರಂಭವಾಗಿದ್ದು, ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ ಎಂದಿದೆ ಚಿತ್ರತಂಡ. 

‘ಝೀಬ್ರಾ’ ಮಾಸ್ ಎಂಟರ್‌ಟೇನ್ಮೆಂಟ್‌ ಚಿತ್ರವಾಗಿದ್ದು, ಡಾಲಿ ಜೊತೆ ಸತ್ಯದೇವ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಈ ಚಿತ್ರದಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಸತ್ಯದೇವ್ ಮತ್ತು ಡಾಲಿ ಇಬ್ಬರೂ ಚಿತ್ರದ ನಾಯಕರಾಗಿದ್ದು, ಇಬ್ಬರದ್ದೂ ಇದು 26ನೇ ಸಿನಿಮಾ ಎಂಬುದು ವಿಶೇಷ ಎಂದಿದೆ ಚಿತ್ರತಂಡ. ಈ ಸಿನಿಮಾದಲ್ಲಿ ಪ್ರಿಯಾ ಭವಾನಿ ಶಂಕರ್‌, ಸತ್ಯರಾಜ್‌, ಸುನೀಲ್‌ ವರ್ಮ, ಜೆನಿಫರ್‌, ಸುರೇಶ್‌ಚಂದ್ರ ಮೆನನ್‌, ಕಲ್ಯಾಣಿ ನಟರಾಜ್‌ ಸೇರಿ ಹಲವು ಕಲಾವಿದರು ನಟಿಸಿದ್ದಾರೆ. 

ಸಿನಿಮಾವನ್ನು ಈಶ್ವರ್ ಕಾರ್ತಿಕ್ ನಿರ್ದೇಶನ ಮಾಡಿದ್ದು, ಕತೆ-ಚಿತ್ರಕಥೆಯೂ ಅವರದ್ದೇ. ರವಿ ಬಸ್ರೂರು ಸಂಗೀತ ನಿರ್ದೇಶನ ಚಿತ್ರಕ್ಕಿದೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.