ADVERTISEMENT

ನಾವು ಹೆಮ್ಮೆ ಪಡುವಂತೆ ಮಾಡಿದ್ದೀರಿ: ವೀರ್‌ ದಾಸ್‌ಗೆ ನಟಿ ಪ್ರಿಯಾಂಕಾ ಶ್ಲಾಘನೆ

ಪಿಟಿಐ
Published 25 ನವೆಂಬರ್ 2021, 6:25 IST
Last Updated 25 ನವೆಂಬರ್ 2021, 6:25 IST
ಸ್ಟ್ಯಾಂಡ್‌ಅಪ್‌ ಕಮಿಡಿಯನ್‌ ವೀರ್‌ ದಾಸ್‌ ಮತ್ತು ನಟಿ ಪ್ರಿಯಾಂಕಾ ಚೋಪ್ರಾ
ಸ್ಟ್ಯಾಂಡ್‌ಅಪ್‌ ಕಮಿಡಿಯನ್‌ ವೀರ್‌ ದಾಸ್‌ ಮತ್ತು ನಟಿ ಪ್ರಿಯಾಂಕಾ ಚೋಪ್ರಾ   

ಲಾಸ್‌ ಏಂಜಲಿಸ್‌: ಸ್ಟ್ಯಾಂಡ್‌ಅಪ್‌ ಕಮಿಡಿಯನ್‌ (ವಿಡಂಬನಕಾರ) ವೀರ್‌ ದಾಸ್‌ ಅವರು 2021ರ ಅಂತರರಾಷ್ಟ್ರೀಯ ಎಮ್ಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದಕ್ಕೆ ನಟಿ ಪ್ರಿಯಾಂಕಾ ಚೋಪ್ರಾ ಅಭಿನಂದನೆಗಳನ್ನು ತಿಳಿಸಿದ್ದಾರೆ.

ವೀರ್‌ ದಾಸ್‌ ಪದಕ ಮತ್ತು ಸಹಭಾಗಿತ್ವದ ಸ್ಮರಣೆಗಳನ್ನು ಹಂಚಿಕೊಂಡಿರುವ ಇನ್‌ಸ್ಟಾಗ್ರಾಂ ಪೋಸ್ಟ್‌ ಅನ್ನು ಶೇರ್‌ ಮಾಡಿರುವ ಪ್ರಿಯಾಂಕಾ 'ಅಭಿನಂದನೆಗಳು ವೀರ್‌ ದಾಸ್‌. ನಾವು ಹೆಮ್ಮೆ ಪಡುವಂತೆ ಮಾಡಿದ್ದೀರಿ' ಎಂದು ಶ್ಲಾಘಿಸಿದ್ದಾರೆ.

ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುವ ಕಾಮಿಡಿ ವಿಶೇಷ ಕಾರ್ಯಕ್ರಮ 'ವೀರ್‌ ದಾಸ್‌: ಫಾರ್‌ ಇಂಡಿಯಾ' ಕಾಮಿಡಿ ವಿಭಾಗದಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ಫ್ರೆಂಚ್‌ ಕಾಮಿಡಿ ಸರಣಿ 'ಕಾಲ್‌ ಮೈ ಏಜೆಂಟ್' ಸೀಸನ್‌ 4 ಪ್ರತಿಷ್ಠಿತ ಎಮ್ಮಿ ಪ್ರಶಸ್ತಿಗೆ ಭಾಜನಗೊಂಡಿದೆ.

ADVERTISEMENT

'ಅಂತರರಾಷ್ಟ್ರೀಯ ಎಮ್ಮಿ ಪ್ರಶಸ್ತಿಯ ಉತ್ತಮ ಹಾಸ್ಯ ವಿಭಾಗಕ್ಕೆ ನಾನು ನಾಮನಿರ್ದೇಶನಗೊಂಡಿದ್ದೆ. ನಾನು ಹೆಚ್ಚು ಇಷ್ಟ ಪಡುವ ಕಾಲ್‌ ಮೈ ಏಜೆಂಟ್‌ ಶೋ ಪ್ರಶಸ್ತಿಯನ್ನು ಗೆದ್ದಿದೆ. ನನ್ನ ದೇಶವನ್ನು ಪ್ರತಿನಿಧಿಸಲು ಅವಕಾಶ ಸಿಕ್ಕಿದ್ದು ನನಗೆ ಹೆಮ್ಮೆ. ಧನ್ಯವಾದ' ಎಂದು 42 ವರ್ಷದ ವೀರ್‌ ದಾಸ್‌ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.

ಅಮೆರಿಕದ ವಾಷಿಂಗ್ಟನ್‌ ಡಿಸಿಯಲ್ಲಿರುವ ಜಾನ್‌ ಎಫ್‌.ಕೆನಡಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಎರಡೂ ರೀತಿಯ ಭಾರತದಿಂದ ಬಂದಿದ್ದೇನೆ' ಎಂದು ಕೆಲವು ನಿದರ್ಶನಗಳನ್ನು ಹೇಳಿ ವಿಡಂಬನೆ ಮಾಡಿದ ಬಳಿಕ ವೀರ್‌ ದಾಸ್‌ ಸುದ್ದಿಯ ಮುನ್ನೆಲೆಗೆ ಬಂದಿದ್ದರು. ಇವರ ಮಾತುಗಳಿಗೆ ಭಾರಿ ಪರ-ವಿರೋಧ ವ್ಯಕ್ತವಾಗಿತ್ತು. ದೂರುಗಳು ಕೂಡ ದಾಖಲಾಗಿದ್ದವು.

ನಟ ನವಾಜುದ್ದೀನ್‌ ಸಿದ್ದಿಕಿ ಅವರ ನೆಟ್‌ಫ್ಲಿಕ್ಸ್‌ ಸಿನಿಮಾ 'ಸೀರಿಯಸ್‌ ಮೆನ್‌' ಅತ್ಯುತ್ತಮ ಪ್ರದರ್ಶನ ವಿಭಾಗಕ್ಕೆ ನಾಮನಿರ್ದೇಶನಗೊಂಡಿತ್ತು. ಆದರೆ ಸ್ಕಾಟಿಷ್‌ ನಟ ಡೇವಿಡ್‌ ಟೆನ್ನಾಂಟ್‌ ಅವರ ಡೆಸ್‌(Des) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.