ADVERTISEMENT

‘ನಾವೂ ಸಾಮಾನ್ಯರೇ’

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2018, 13:34 IST
Last Updated 30 ಸೆಪ್ಟೆಂಬರ್ 2018, 13:34 IST
Indian cricketer Virat Kohli (L) and Bollywood actress Anushka Sharma, who were recently married in Italy, pose during a reception in New Delhi on December 21, 2017. The wedding in Tuscany on December 11 ended weeks of speculation in the gossip pages of India's newspapers and on the airwaves of the country's excitable 24-hour news channels that the couple had recently got engaged. Kohli and Sharma, dubbed "Virushka" by local media, have generated the same sort of excitement and coverage in India as Britain's Prince Harry and fiance Meghan Markle have in the West. / AFP PHOTO / PRAKASH SINGH

ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಅವರನ್ನು ನೋಡಿದರೆ ಹೇಳಿ ಮಾಡಿಸಿದ ಜೋಡಿ ಎಂದು ಅನಿಸದೇ ಇರಲ್ಲ. ಅವರಿಬ್ಬರೂ ಅಷ್ಟೇ, ಸಮಯ ಸಿಕ್ಕಾಗಲೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮಿಬ್ಬರ ನಡುವಿನ ಪ್ರೀತಿ, ಬಾಂಧವ್ಯವನ್ನು ಹಂಚಿಕೊಳ್ಳುತ್ತಾರೆ. ಹಾಗೇ ಅತಿ ಹೆಚ್ಚು ಟ್ರೋಲ್‌ ಆದ ಜೋಡಿಯೂ ಅವರೇ ಆಗಿರಬಹುದು. ಇಬ್ಬರೂ ಸ್ಟಾರ್‌ಗಳು. ಅವರ ಜೀವನ ಹೇಗಿರಬಹುದು ಎಂಬ ಕುತೂಹಲ ಎಲ್ಲರದ್ದು. ಅದಕ್ಕೆ ಈಗ ವಿರಾಟ್‌ ಉತ್ತರಿಸಿದ್ದಾರೆ.

‘ಅನುಷ್ಕಾ ಶರ್ಮ ಹಾಗೂ ನಾನು ಜನರು ಭಾವಿಸಿದ್ದಂತೆ ಕಾಲ್ಪನಿಕ ಲೋಕದಲ್ಲಿ ಬದುಕುತ್ತಿಲ್ಲ. ನಾವು ಮನೆಯಲ್ಲಿ ಸಾಮಾನ್ಯ ಪತಿ ಪತ್ನಿಯರಂತೆಇದ್ದೇವೆ’ ಎಂದು ವಿರಾಟ್‌ ಹೇಳಿಕೊಂಡಿದ್ದಾರೆ. ‘ನಮ್ಮ ಸ್ಟಾರ್‌ಗಿರಿ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಲು ಅವಕಾಶ ಮಾಡಿಕೊಡುವುದಿಲ್ಲ. ಆದರೆ ಈಗಿನ ಯುವ ಪೀಳಿಗೆಗೆ ಅದು ಪ್ರೇರಣೆಯಂತೆ ಅದನ್ನು ಬಳಸಿಕೊಳ್ಳುತ್ತೇವೆ’ ಎಂದು ಹೇಳಿದ್ದಾರೆ.

‘ನಾವಿಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ. ಮದುವೆಯಾದ ಆರಂಭದಲ್ಲಿ ನಮಗೂ ವೈಯಕ್ತಿಕ ಬದುಕಿದೆ. ಜನರು ಅದಕ್ಕೆ ಪ್ರಾಮುಖ್ಯತೆ ಕೊಡಬೇಕು ಎಂದು ಅಂದುಕೊಳ್ಳುತ್ತಿದ್ದೇವು. ಆದರೆ ಕ್ರಿಕೆಟ್ ಹಾಗೂ ಸಿನಿಮಾವನ್ನು ಆರಾಧಿಸುವ ದೇಶದಲ್ಲಿ ಜನರು ನಮ್ಮ ಬಗ್ಗೆ ಈ ತರದ ಕುತೂಹಲಗಳನ್ನು ಹೊಂದಿರುತ್ತಾರೆ ಎಂಬುದು ಅರ್ಥವಾಯಿತು. ಆದರೆ ಅವರೆಲ್ಲರ ನಿರೀಕ್ಷೆಯಂತೆ ನಾವು ಕಾಲ್ಪನಿಕ ಅಥವಾ ಸಿನಿಮಾಗಳಲ್ಲಿ ತೋರಿಸಿದಂತೆ ಬದುಕುತ್ತಿಲ್ಲ. ನಮ್ಮ ಜೀವನಶೈಲಿ ಶ್ರೀಮಂತವಾಗಿರಬಹುದು, ಆದರೆ ನಿಜಜೀವನದಲ್ಲಿ ನಾವು ಸಾಮಾನ್ಯ ಮನುಷ್ಯರೇ’ ಎಂದಿದ್ದಾರೆ.

ADVERTISEMENT

‘ಈ ಸ್ಟಾರ್‌ಗಿರಿಯಿಂದ ನಮ್ಮ ಜವಾಬ್ದಾರಿಯೂ ಹೆಚ್ಚಾಗಿದೆ. ನನಗೆ ಹಾಗೂ ನನ್ನ ಪತ್ನಿಗೆ ಇದರ ಅರಿವಿದೆ. ಜನರಿಗೆ ಇದು ಪ್ರೇರಣೆಯಾಗಿ, ನಾವು ಅವರಿಗೆ ಸಾಧನೆ ಮಾಡಲು ಉತ್ತಮ ಉದಾಹರಣೆಯಾಗಬೇಕು ಎಂಬುದು ನಮ್ಮಾಸೆ. ಜನರು ಸರಿಯಾದ ವ್ಯಕ್ತಿ ಅಥವಾ ಮಾದರಿಯನ್ನು ಅನುಕರಿಸುವಂತೆ ನಾವು ಮಾಡಬೇಕು. ಇನ್ನೊಬ್ಬರು ನಮ್ಮ ಬಗ್ಗೆ ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ, ಸರಿಯಾಗಿ ಗುರಿ ತಲುಪುವುದು ಮುಖ್ಯ’ ಎಂದು ಹೇಳಿದ್ದಾರೆ.

‘ಭಾರತದಲ್ಲಿ ಅಭಿಮಾನಿಗಳ ಕಣ್ಣಿಂದ ತಪ್ಪಿಸಿಕೊಳ್ಳುವುದು ತುಂಬ ಕಷ್ಟ’ ಎಂದು ತಮ್ಮ ಸಂಕಷ್ಟ ತೋಡಿಕೊಂಡಿರುವ ಅವರು, ‘ಬೇರೆ
ದೇಶಗಳಲ್ಲಿ ಪ್ರವಾಸಕ್ಕೆ ತೆರಳಿದಾಗ ಸಾಮಾನ್ಯರಂತೆ ನಾವು ಸಂತೋಷ ಪಡುತ್ತೇವೆ. ನಮ್ಮಿಬ್ಬರಿಗೂ ಪ್ರಾಣಿಗಳೆಂದರೆ ತುಂಬ ಇಷ್ಟ’ ಎಂದು ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.