ADVERTISEMENT

ಅಂತರಂಗದ ರಸದೌತಣ

​ಪ್ರಜಾವಾಣಿ ವಾರ್ತೆ
Published 9 ಜನವರಿ 2011, 9:50 IST
Last Updated 9 ಜನವರಿ 2011, 9:50 IST


ಅಂತರಂಗ ರಂಗ ತಂಡ ತನ್ನ 30ನೇ ವರ್ಷದ ಸಂಭ್ರಮದ ಅಂಗವಾಗಿ ಜಯನಗರ ನ್ಯಾಷನಲ್ ಕಾಲೇಜಿನ ಎಚ್ಚೆನ್ ಕಲಾಕ್ಷೇತ್ರದಲ್ಲಿ 7 ದಿನಗಳ ‘ರಂಗ ಸಪ್ತಾಹ’ ಹಮ್ಮಿಕೊಂಡಿತ್ತು.

ಕಾರ್ಯಕ್ರಮವನ್ನು ಡಾ. ಮಾಸ್ಟರ್ ಹಿರಣ್ಣಯ್ಯ ಉದ್ಘಾಟಿಸಿದರು. ಸಪ್ತಾಹದಲ್ಲಿ ಕಲಾ ಗಂಗೋತ್ರಿ ತಂಡದವರು ಡಾ.ಬಿ.ವಿ. ರಾಜಾರಾಂ ನಿರ್ದೇಶನದ ‘ಮೈಸೂರು ಮಲ್ಲಿಗೆ’, ಅಂತರಂಗ ತಂಡದವರು ಟಿ.ಪಿ. ಕೈಲಾಸಂ ರಚನೆಯ ‘ಹುತ್ತದಲ್ಲಿ ಹುತ್ತ’, ಸಂಚಾರಿ ಥಿಯೇಟ್ರು ತಂಡದವರು ಎನ್.ಮಂಗಳಾ ನಿರ್ದೇಶನದ  ‘ಕಮಲಮಣಿ ಕಾಮಿಡಿ ಕಲ್ಯಾಣ’ ನಾಟಕ ಪ್ರದರ್ಶಿಸಿದರು.

ರೂಪಾಂತರ ತಂಡದಿಂದ ಕನಕದಾಸರ ಪದಗಳ ಆಧಾರಿತ ‘ರಾಮಧ್ಯಾನ’, ಅಂಬಾರಿ ತಂಡದ ಮೈಕೊ ಶಿವಶಂಕರ್ ನಿರ್ದೇಶನದ ‘ಮಾಯೆ ಅಂದ್ರೆ ಮಾಯೆ’,  ಸಂಚಯ ತಂಡದ ಜೋಸೆಫ್ ನಿರ್ದೇಶನದ ‘ತದ್ರೂಪಿ’, ಅರ್ಚನಾ ಶ್ಯಾಂ ನಿರ್ದೇಶನದಲ್ಲಿ ಅಂತರಂಗ ತಂಡ ಅಭಿನಯಿಸಿದ ‘ಶಾಲಭಂಜಿಕೆ’ ನಾಟಕಗಳು ಎಲ್ಲಾ ವರ್ಗದ ರಂಗಾಸ್ತಕರಿಗೂ ರಸದೌತಣ ನೀಡಿದವು.

ADVERTISEMENT

ಇದೇ ಸಂದರ್ಭದಲ್ಲಿ ಮೇಕಪ್ ನಾಣಿ ಪ್ರಶಸ್ತಿಯನ್ನು ಪ್ರಸಾದನ ತಜ್ಞ ಮೂಚಿ ರಾಮಕೃಷ್ಣ ಅವರಿಗೆ ಪ್ರದಾನ ಮಾಡಲಾಯಿತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.