ADVERTISEMENT

ಬೀದಿಯಲ್ಲಿ ಮಿಂಚಿದ `ಗದ್ದುಗೆ ಪುರಾಣ'

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 19:59 IST
Last Updated 2 ಏಪ್ರಿಲ್ 2013, 19:59 IST

ವಿಶ್ವ ರಂಗಭೂಮಿ ದಿನದ ಅಂಗವಾಗಿ ಕಳೆದ ಬುಧವಾರ (ಮಾ.27) ನಾಗರಾಜ ಕೋಟೆ ಅವರ `ಕೋಟೆ ಕಲಾ ಅಕಾಡೆಮಿ ಟ್ರಸ್ಟ್'ನ ಬಣ್ಣ ಅಭಿನಯ ಶಾಲೆಯ ವಿದ್ಯಾರ್ಥಿಗಳು ಬೀದಿ ನಾಟಕ ಆಯೋಜಿಸಿದ್ದರು.

ಟಿ.ಎಸ್. ಲೋಹಿತಾಶ್ವ ರಚನೆಯ `ಗದ್ದುಗೆ ಪುರಾಣ' ನಾಟಕವನ್ನು ಪ್ರದರ್ಶಿಸಲಾಯಿತು. ಈ ಜಾಥಾವು ನಗರದ ನಾಲ್ಕು ಸ್ಥಳಗಳಲ್ಲಿ ನಡೆಯಿತು.

ಮೊದಲ ಪ್ರದರ್ಶನ ಗಿರಿನಗರದ ಸೀತಾ ಸರ್ಕಲ್‌ನಲ್ಲಿ ಬೆಳಿಗ್ಗೆ 10.30ರಿಂದ ಆರಂಭವಾಯಿತು. ಎರಡನೆ ಪ್ರದರ್ಶನ ಮಧ್ಯಾಹ್ನ 12.30ರಿಂದ 1.30ರವರೆಗೆ ಪದ್ಮನಾಭನಗರದ `12ಬಿ' ನಿಲ್ದಾಣದ ಬಳಿ ನಡೆಯಿತು. ಮೂರನೇ ಪ್ರದರ್ಶನ ಬನಶಂಕರಿ ದೇವಸ್ಥಾನದ ಹತ್ತಿರದ ಬಿಎಂಟಿಸಿ ಬಸ್ ನಿಲ್ದಾಣ ಹಾಗೂ ಕೊನೆಯ ಪ್ರದರ್ಶನ ತ್ಯಾಗರಾಜನಗರದ ಡಾ. ರಾಜಕುಮಾರ್ ರಂಗಮಂದಿರದ ಬಳಿ ಸಂಜೆ 4.30ರಿಂದ 5.30ರವರೆಗೆ ನಡೆಯಿತು.

ಹಾಸ್ಯ ಕಲಾವಿದ ನಾಗರಾಜ ಕೋಟೆ ಅವರು ಗದ್ದುಗೆ ಪುರಾಣ ನಾಟಕ ನಿರ್ದೇಶಿಸಿದ್ದರು. ನಾಲ್ಕು ಸ್ಥಳಗಳಲ್ಲೂ ಹೆಚ್ಚಿನ ಸಂಖ್ಯೆಯ ರಂಗಾಸಕ್ತರು ಬೀದಿ ನಾಟಕ ವೀಕ್ಷಿಸುವ ಮೂಲಕ ರಂಗಭೂಮಿ ದಿನಕ್ಕೆ ವಿಶೇಷ ರಂಗು ತಂದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.