ADVERTISEMENT

ಮತ್ತೆ ‘ಮಾಯಾಮೃಗ’ದ ಓಟ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 19:30 IST
Last Updated 12 ಮಾರ್ಚ್ 2014, 19:30 IST
ಮತ್ತೆ ‘ಮಾಯಾಮೃಗ’ದ ಓಟ
ಮತ್ತೆ ‘ಮಾಯಾಮೃಗ’ದ ಓಟ   

ಮಾಯಾಮೃಗ’ ಕನ್ನಡದ ಕಿರುತೆರೆ ವೀಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿದಿರುವ ಬೆರಳೆಣಿಕೆಯ ಧಾರಾವಾಹಿಗಳಲ್ಲಿ ಒಂದು. ಟಿ.ಎನ್. ಸೀತಾರಾಂ, ಪಿ. ಶೇಷಾದ್ರಿ ಹಾಗೂ ನಾಗೇಂದ್ರ ಶಾ  ನಿರ್ದೇಶನದ ಈ ಧಾರಾವಾಹಿ ೧೯೯೮ರಲ್ಲಿ ಚಂದನ ವಾಹಿನಿಯಲ್ಲಿ ಮೊದಲ ಬಾರಿಗೆ ಪ್ರಸಾರಗೊಂಡಿತ್ತು.

‘ಮಾಯಾಮೃಗ’ ಇನ್ನೂ ಪ್ರೇಕ್ಷಕರ ಮನದಲ್ಲಿ ಹಸಿರಾಗಿಯೇ ಇದೆ. ಈಗ ಮತ್ತೆ ಪ್ರೇಕ್ಷಕರ ಒತ್ತಾಯದ ಮೇರೆಗೆ ಜೀ ಕನ್ನಡ ವಾಹಿನಿಯಲ್ಲಿ (ಮಾರ್ಚ್ 10ರಿಂದ ಆರಂಭವಾಗಿದೆ) ಸೋಮವಾರದಿಂದ ಶನಿವಾರದವರೆಗೆ ಸಂಜೆ 6 ಗಂಟೆಗೆ ಪ್ರದರ್ಶನಗೊಳ್ಳುತ್ತಿದೆ. ಧಾರಾವಾಹಿ ಮೂರನೇ ಬಾರಿ ಮರುಪ್ರದರ್ಶನಗೊಳ್ಳುತ್ತಿದ್ದು, ಹಿಂದಿನಂತೆಯೇ ಈ ಸಲವೂ ಪ್ರೇಕ್ಷಕನನ್ನು ಸೆಳೆಯುತ್ತಿದೆ. 

ಟಿ.ಎನ್. ಸೀತಾರಾಂ, ಹಿರಿಯ ನಟ ದತ್ತಣ್ಣ, ಮಾಳವಿಕಾ, ಲಕ್ಷ್ಮೀ, ಅವಿನಾಶ್, ಮಂಜುಭಾಷಿಣಿ, ಎಂ.ಡಿ. ಪಲ್ಲವಿ, ಸೇತುರಾಂ, ಲಕ್ಷ್ಮೀ ಚಂದ್ರಶೇಖರ್, ವೈಶಾಲಿ ಕಾಸರವಳ್ಳಿ, ವೀಣಾ ಸುಂದರ್, ಮುಖ್ಯಮಂತ್ರಿ ಚಂದ್ರು ಇತರರ ಅಭಿನಯ ಇಲ್ಲಿದೆ. ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ಕೆ.ಎಸ್. ನರಸಿಂಹಸ್ವಾಮಿ ಅವರು ಸೀತಾರಾಂ ಅವರ ಒತ್ತಾಯಕ್ಕೆ ಮಣಿದು ಬರೆದುಕೊಟ್ಟಿದ್ದರಂತೆ. ಆ ಹಾಡಿಗೆ ಸಿ. ಅಶ್ವಥ್ ರಾಗ ಸಂಯೋಜಿಸಿದ್ದರು. ನಾಲ್ಕು ವಿಭಿನ್ನ ಕುಟುಂಬಗಳ ನಡುವೆ ನಡೆಯುವ ಕಥೆ ಧಾರಾವಾಹಿಯದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.